ಕಾಸರಗೋಡು: ಮನೆಮನೆಗಳಲ್ಲಿ ನಿರಂತರವಾಗಿ ಭಜನೆ ನಡೆಯುವುದರಿಂದ ಆಧ್ಯಾತ್ಮಿಕ ಉನ್ನತಿಗೆ ಸೋಪಾನವಾಗುತ್ತದೆ. ಭಜನೆಯನ್ನು ಅನುಭವಿಸಿ ಹಾಡುವ ಮತ್ತು ಆಲಿಸುವ ಮೂಲಕ ಮಕ್ಕಳ ಮತ್ತು ಯುವ ಮನಸ್ಸುಗಳಲ್ಲಿ ಧಾರ್ಮಿಕತೆಯ ಮೌಲ್ಯಗಳು ಮತ್ತು ಸನಾತನ ಪರಂಪರೆಯ ಜಾಗೃತಿ ಮೂಡಲು ಸಹಕಾರಿಯಾಗುತ್ತದೆ. ಒಂದು ದೇವಸ್ಥಾನದ ಜೀರ್ಣೋದ್ಧಾರ ವೆಂದರೆ ಆತ್ಮೋದ್ಧಾರ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.
ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯುವ ಮಂಡಲ ಭಜನಾ ಸಂಕೀರ್ತನೋತ್ಸವದಲ್ಲಿ ವಿಶೇಷ ಸತ್ಸಂಗ, ಮಾರ್ಗದರ್ಶನ ನೀಡಿ ಅವರು ಆಶೀರ್ವದಿಸಿದರು. ಹಾಗೆಯೇ ಶ್ರೀ ಕ್ಷೇತ್ರದ ನವೀಕರಣ ಕಾಮಗಾರಿಗಳ ವೀಕ್ಷಣೆ ನಡೆಸಿದರು.
ಕಾರ್ಯಕ್ರಮದಲ್ಲಿ ಮಧೂರು ದೇವಸ್ಥಾನ ನವೀಕರಣ ಸಮಿತಿ ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕ್ಷೇತ್ರ ಸಂರಕ್ಷಣಾ ಸಮಿತಿ ರಾಜ್ಯ ಕಾರ್ಯಕಾರಿ ಸದಸ್ಯ ಅಪ್ಪಯ್ಯ ನಾೈಕ್ ಮಧೂರು, ನವೀಕರಣ ಸಮಿತಿ ಕಾರ್ಯದರ್ಶಿ ಮುರಳಿ ಗಟ್ಟಿ, ನವೀಕರಣ ಸಮಿತಿಯ ಮಂಜುನಾಥ ಕಾಮತ್, ಸುರೇಶ್ ನಾೈಕ್, ಎ.ಮನೋಹರ, ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು. ಜಗದೀಶ್ ಕೂಡ್ಲು ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

.jpg)
