ಕಾಸರಗೋಡು: ಮೀನು ಕಾರ್ಮಿಕರಿಗೆ ವಸತಿ ನಿರ್ಮಿಸಲು ಸರ್ಕಾರವೇ ನೀಡಿದ ಪಟ್ಟೆ ಭೂಮಿಯಲ್ಲಿ ಮನೆ ನಿರ್ಮಿಸಲು ಅನುಮತಿ ನೀಡದಿರುವುದನ್ನು ಹಾಗು ಹಿಂದೆ ಭೂ ತೆರಿಗೆ ವಸೂಲಿ ಮಾಡುತ್ತಿದ್ದ ಭೂಮಿಯ ಸರ್ವೇ ನಂಬ್ರ ಸರಿಯಾಗಿಲ್ಲ ಎಂದು ಹೇಳಿ ತೆರಿಗೆ ವಸೂಲಿ ಮಾಡುವುದನ್ನು ನಿಲ್ಲಿಸಿರುವ ಸರ್ಕಾರದ ನೀತಿಯನ್ನು ಪ್ರತಿಭಟಿಸಿ ಬಿಜೆಪಿ ಕಾಸರಗೋಡು ಮಂಡಲ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಯಿತು.
ಧರಣಿಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ಉದ್ಘಾಟಿಸಿದರು. ಕಾಸರಗೋಡು ಮಂಡಲ ಅಧ್ಯಕೆ ಪ್ರಮೀಳಾ ಮಜಲ್ ಅಧ್ಯಕ್ಷತೆ ವಹಿಸಿದರು. ನೇತಾರರಾದ ಕೆ.ಮಲ್ಲಿಕಾ, ಬಿಂದು ಬಾಬು, ಗುರು ಪ್ರಸಾದ್ ಪ್ರಭು, ಉಮೇಶ್ ಕಡಪ್ಪುರ, ಗೋಪಾಲಕೃಷ್ಣ, ರವೀಂದ್ರ ಪೂಜಾರಿ ಮೊದಲಾದವರು ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪಾಡಿ ಸ್ವಾಗತಿಸಿದರು. ಅಶೋಕನ್ ವಂದಿಸಿದರು.

