HEALTH TIPS

ಶ್ರೀಲಂಕಾ: ಮತ್ತೆ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ಅಲಿ ಸಬ್ರಿ!

           ಕೊಲಂಬೊ: ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಲಿ ಸಬ್ರಿ ಶುಕ್ರವಾರ ಮತ್ತೆ ಸಚಿವ ಸ್ಥಾನಕ್ಕೆ ಮರಳಿದ್ದಾರೆ. ಗಣನೀಯ ವಿದೇಶಿ ವಿನಿಮಯ ಕೊರತೆಯಿಂದ  ಹೊರಬರಲು ಐಎಂಎಫ್ ಗೆ  ತೆರಳುತ್ತಿರುವ ಲಂಕಾ ಸರ್ಕಾರದ  ಮಾತುಕತೆ ಗುಂಪಿನ ಮುಖ್ಯಸ್ಥರೂ ಕೂಡಾ ಆಗಿದ್ದಾರೆ.

               ತನಗಿಂತಲೂ ಹೆಚ್ಚಿನ ಅರ್ಹತೆವುಳ್ಳವರು ಹಣಕಾಸು ಖಾತೆ ವಹಿಸಿಕೊಳ್ಳಲಿ ಎಂಬ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆದಾಗ್ಯೂ, ಯಾರೂ ಕೂಡಾ ಈ ಸಚಿವ ಸ್ಥಾನ ವಹಿಸಿಕೊಳ್ಳಲು ಮುಂದೆ ಬಾರದ ಹಿನ್ನೆಲೆಯಲ್ಲಿ ಹಣಕಾಸು ಸಚಿವರಾಗಿ ಮುಂದುವರೆಯಲು ತೀರ್ಮಾನಿಸಿರುವುದಾಗಿ ಮಾಜಿ ನ್ಯಾಯ ಸಚಿವ ಸಬ್ರಿ ಸಂಸತ್ತಿನಲ್ಲಿಂದು ತಿಳಿಸಿದರು.

               ಹಣಕಾಸು ಸಚಿವನಾಗಿ ಅಗತ್ಯವಾದದ್ದನ್ನು ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ರಕ್ಷಿಸುವುದಾಗಿ ಅವರು ಹೇಳಿದರು.  ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷ ಏಪ್ರಿಲ್ 4 ರಂದು ಸಹೋದರ ಬಾಸಿಲ್ ರಾಜಪಕ್ಸ ಅವರನ್ನು ವಜಾಗೊಳಿಸಿ ಸಬ್ರಿ ಅವರನ್ನು ಹಣಕಾಸು ಸಚಿವರಾಗಿ ನೇಮಕ ಮಾಡಿದ್ದರು.

               ಆದಾಗ್ಯೂ, ಅಸಮರ್ಪಕ ಆರ್ಥಿಕ ನಿರ್ವಹಣೆ ಆರೋಪದಿಂದಾಗಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮಧ್ಯೆ 24 ಗಂಟೆಗಳೊಳಗೆ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಆದರೆ, ಸಬ್ರಿ ಅವರ ರಾಜೀನಾಮೆ ಪತ್ರವನ್ನು ರಾಜಪಕ್ಸ ಅಂಗೀಕರಿಸಿರಲಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries