HEALTH TIPS

ಬದಿಯಡ್ಕ ಪೇಟೆಯಲ್ಲಿ "ಶ್ರೀನಿಧಿ ಕ್ಲಿನಿಕ್" ಗೆ ತುಳು ಲಿಪಿ ನಾಮಫಲಕ ಅಳವಡಿಕೆ

             ಬದಿಯಡ್ಕ: ಬದಿಯಡ್ಕದ ಜನಪ್ರಿಯ ವೈದ್ಯರಾದ ಡಾ. ಶ್ರೀನಿಧಿ ಸರಳಾಯ ಇವರ "ಶ್ರೀನಿಧಿ ಕ್ಲಿನಿಕ್" ಗೆ ತುಳು ಲಿಪಿ ನಾಮ ಫಲಕವನ್ನು ಶುಕ್ರವಾರ ಅಳವಡಿಸಲಾಯಿತು.  


                     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಕುಮಾರಿ ಬಿ ತುಳು ಲಿಪಿ ನಾಮ ಫಲಕವನ್ನು ಉದ್ಘಾಟಿಸಿ ಮುಂಬರುವ ದಿನಗಳಲ್ಲಿ ಬದಿಯಡ್ಕದ ಹೆಚ್ಚಿನ ಸ್ಥಳಗಳಲ್ಲಿ ತುಳು ಲಿಪಿ ನಾಮಫಲಕವನ್ನು ಅಳವಡಿಸುವಲ್ಲಿ ತನ್ನ ಸಹಕಾರವನ್ನು ಮತ್ತು ಪ್ರಯತ್ನ ಮಾಡುವುದಾಗಿ ತಿಳಿಸಿದರು. 


          ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಅವರು ಶುಭಾಶಂಸನೆ ಜೊತೆಯಲ್ಲಿ ತುಳು ಭಾಷೆಯ ಮಹತ್ವವನ್ನು ತಿಳಿಸಿ ತುಳು ಲಿಪಿಯನ್ನು ಬಳಸಿ ಇನ್ನಷ್ಟು ಬೆಳವಣಿಗೆಗೆ ಪೆÇ್ರೀತ್ಸಾಹಿಸಬೇಕು ಎಂದರು. ಡಾ. ಶ್ರೀನಿಧಿ ಸರಳಾಯ ಅವರು ಸ್ವಾಗತಿಸಿದರು. ಜೈ ತುಳುನಾಡ್ ಕಾಸರಗೋಡು ಘಟಕದ ಕಾರ್ಯದರ್ಶಿ ಕಾರ್ತಿಕ್ ಕೆ ಎನ್ ಪೆರ್ಲ ವಂದಿಸಿದರು. ಸುಂದರ ಬಾರಡ್ಕ ನಿರೂಪಿಸಿದರು. ಜೈ ತುಳುನಾಡ್ ಕಾಸರಗೋಡು ಘಟಕದ ಉಪಕಾರ್ಯದರ್ಶಿ ಜಗನ್ನಾಥ ಕುಲಾಲ್,  ಶ್ವೇತ ಕಜೆ, ತುಳು ಸಾಹಿತಿಗಳು, ಪತ್ರಕರ್ತರು ಉಪಸ್ಥಿತರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries