HEALTH TIPS

ಇಮ್ರಾನ್ ಖಾನ್ ಗೆ ‘ನೆಕ್ಲೆಸ್’ ಸಂಕಷ್ಟ, ಪದಚ್ಯುತ ಪಾಕ್ ಪ್ರಧಾನಿ ವಿರುದ್ಧ ಎಫ್‌ಐಎ ತನಿಖೆ ಆರಂಭ

            ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಧಿಕಾರಾವಧಿಯಲ್ಲಿ ಉಡುಗೊರೆಯಾಗಿ ಪಡೆದ ದುಬಾರಿ ನೆಕ್ಲೆಸ್ ಅನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಯೊಬ್ಬರಿಗೆ 18 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂಬ ಆರೋಪದ ಮೇಲೆ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ತನಿಖೆ ಆರಂಭಿಸಿದೆ.

            ಇಮ್ರಾನ್ ಖಾನ್ ಉಡುಗೊರೆಯಾಗಿ ಪಡೆದ ನೆಕ್ಲೇಸ್ ಅನ್ನು ತೋಶಾ-ಖಾನಾ(ರಾಜ್ಯ ಉಡುಗೊರೆ ಭಂಡಾರ)ಕ್ಕೆ ನೀಡಿಲ್ಲ. ಅದನ್ನ ಮಾಜಿ ವಿಶೇಷ ಸಹಾಯಕ ಜುಲ್ಫಿಕರ್ ಬುಖಾರಿಗೆ ನೀಡಲಾಗಿದೆ. ಅವರು ಅದನ್ನು ಲಾಹೋರ್‌ನ ಆಭರಣ ವ್ಯಾಪಾರಿಗೆ 18 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆಂದು ವರದಿಯಾಗಿದೆ.

            ಇಮ್ರಾನ್ ಖಾನ್ ಅವರ ಅಧಿಕಾರಾವಧಿಯಲ್ಲಿ ಉಡುಗೊರೆಯಾಗಿ ಪಡೆದ ದುಬಾರಿ ನೆಕ್ಲೆಸ್ ಅನ್ನು ರಾಜ್ಯ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪದ ಮೇಲೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎಫ್‌ಐಎ) ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿ ತಿಳಿಸಿದೆ.

             ಸಾರ್ವಜನಿಕ ಉಡುಗೊರೆಗಳನ್ನು ಅದರ ಅರ್ಧ ಬೆಲೆಯನ್ನು ಪಾವತಿಸುವ ಮೂಲಕ ಆ ಉಡುಗೊರೆಗಳನ್ನ ವೈಯಕ್ತಿಕವಾಗಿ ಇರಿಸಿಕೊಳ್ಳಬಹುದು. ಆದರೆ ಕಳೆದ ವಾರ ಸಂಸತ್ತಿನಲ್ಲಿ ಅವಿಶ್ವಾಸ ಮತದಿಂದ ಸೋತ ಇಮ್ರಾನ್ ಖಾನ್, ಅಕ್ರಮವಾಗಿ ರಾಷ್ಟ್ರೀಯ ಖಜಾನೆಗೆ ಕೆಲವು ಲಕ್ಷ ರೂಪಾಯಿಗಳನ್ನಷ್ಟೇ ಠೇವಣಿ ಮಾಡಿದ್ದಾರೆ ಎಂದು ವರದಿ ಹೇಳಿದೆ.

           ಕಾನೂನು ಪ್ರಕಾರ, ರಾಜ್ಯದ ಅಧಿಕಾರಿಗಳು ಗಣ್ಯರಿಂದ ಸ್ವೀಕರಿಸುವ ಉಡುಗೊರೆಗಳನ್ನು ರಾಜ್ಯ ಉಡುಗೊರೆ ಭಂಡಾರಕ್ಕೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಅವರು ಉಡುಗೊರೆಯನ್ನು ಸಲ್ಲಿಸಲು ವಿಫಲರಾದರೆ ಅಥವಾ ಉಡುಗೊರೆ ಮೌಲ್ಯದ ಅರ್ಧದಷ್ಟು ಮೊತ್ತವನ್ನು ಸಲ್ಲಿಸದಿದ್ದರೆ ಅದು ಕಾನೂನುಬಾಹಿರ ಕೃತ್ಯವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries