ಕಾಸರಗೋಡು: ನಗರದ ಎಸ್.ವಿ.ಟಿ. ರಸ್ತೆಯ ನಾಗನ ಕಟ್ಟೆಯಲ್ಲಿ ಪ್ರತಿಷ್ಠೆ ಮಾಡಲಾದ ನಾಗನ ವಿಗ್ರಹವನ್ನು ಸಮಾಜದ್ರೋಹಿಗಳು ತೆಗೆದು ತಿರುಗಿಸಿಟ್ಟ ಘಟನೆ ನಡೆದಿದೆ. ಈ ಬಗ್ಗೆ ಪೋಲೀಸರಿಗೆ ದೂರು ನೀಡಲಾಗಿದೆ.
ವಿಗ್ರಹದ ಸುತ್ತ ತಂಬಾಕು ಉತ್ಪನ್ನಗಳು ಹಾಗು ಆಹಾರ ವಸ್ತುಗಳ ಅವಶಿಷ್ಟಗಳನ್ನು ಚೆಲ್ಲಲಾಗಿದೆ. ಎ.7 ರಂದು ಮಧ್ಯರಾತ್ರಿ ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ. ಶುಕ್ರವಾರ ಬೆಳಗ್ಗೆ ವಿಷಯ ತಿಳಿದು ಭಕ್ತರು ಹಾಗು ಪೋಲೀಸರು ಸ್ಥಳಕ್ಕೆ ತಲುಪಿದ್ದಾರೆ. ಪೋಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ನಾಗನ ಕಟ್ಟೆ ವಠಾರದಲ್ಲಿ ತಂಬಾಕು ಉತ್ಪನ್ನಗಳು, ಆಹಾರ ವಸ್ತುಗಳನ್ನು ಹರಡಿ, ಅಪವಿತ್ರಗೊಳಿಸಲಾಗಿದೆ. ಗುರುವಾರ ಮಧ್ಯರಾತ್ರಿ ಕೃತ್ಯ ನಡೆದಿರಬೇಕೆಂದು ಸಂಶಯಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಶುಕ್ರವಾರ ಬೆಳಗ್ಗೆ ಭಕ್ತಾದಿಗಳು ನಾಗನಕಟ್ಟೆ ಬಳಿ ಜಮಾಯಿಸಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆಹಾಕಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.




