ಬದಿಯಡ್ಕ: ಜೋಡು ದೇವಾಲಯವೆಂದೇ ಖ್ಯಾತಿಯ ಎಡನೀರು ಸಮೀಪದ ಪಾಡಿ ಬೆಳ್ಳೂರು ಶ್ರೀಮಹಾವಿಷ್ಣು ಹಾಗೂ ಶ್ರೀಕೈಲಾರ್ ಶಿವಕ್ಷೇತ್ರಗಳ ವಾರ್ಷಿಕ ಜಾತ್ರೋತ್ಸವ ಏ.3 ರಿಂದ 6ರ ವರೆಗೆ ಇರುವೈಲ್ ಕೇಶವ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ. ಏ.3 ರಂದು ಬೆಳಿಗ್ಗೆ 8.30ಕ್ಕೆ ಬೆಳ್ಳೂರು ಪಾಡಿ ಶ್ರೀಮಹಾವಿಷ್ಣು ಕ್ಷೇತ್ರದಲ್ಲಿ ಉಗ್ರಾಣ ಭರಣ, 10 ರಿಂದ ಭಜನೆ, 12.5 ಕ್ಕೆ ಮಹಾಪೂಜೆ, 1 ರಿಂದ ಅನ್ನದಾನ, ಸಂಜೆ 6ಕ್ಕೆ ಕೈಲಾರ್ ಶ್ರೀಶಿವ ಕ್ಷೇತ್ರದಲ್ಲಿ ದೀಪಾರಾಧನೆ, 7ಕ್ಕೆ ತಿರುವತ್ತಾಯ ಪ್ರಾರ್ಥನೆ, 8 ಕ್ಕೆ ಪೂಜೆ ನಡೆಯಲಿದೆ. ಏ.4 ರಂದು ಕೈಲಾರ್ ಶ್ರೀಶಿವ ಕ್ಷೇತ್ರದಲ್ಲಿ ಬೆಳಿಗ್ಗೆ 6 ರಿಂದ ಉಷಃ ಪೂಜೆ, ಗಣಪತಿ ಹೋಮ, ನವಕ, ಪಂಚಗವ್ಯ, ಕಲಶ|ಪೂಜೆ, |ಶುದ್ದಿಕಲಶ||, ಕಲಶಾಭಿಷೇಕ, ಪೂಜೆ ನಡೆಯಲಿದೆ. 9 ರಿಂದ ಸಂಕಲ್ಪ, ಅ|ಭಿಷೇಕ, ತುಲಾಭಾರ ಸೇವೆ, 9.45 ರಿಂದ ಭಜನೆ, 11ಕ್ಕೆ ಮಹಾಪೂಜೆ, ಬಳಿಕ |ಶ್ರೀಭೂತಬಲಿ, ದರ್ಶನ ಬಲಿ, ಕಾ|ಣಿಕೆ, ರಾಜಾಂಗಣ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1 ರಿಂದ ಅನ್ನದಾನ, ಸoಜೆ 6ಕ್ಕೆ ದೀಪಾರಾಧನೆ, ರಾತ್ರಿಪೂಜೆ ನಡೆಯಲಿದೆ.
ಬೆ|ಳ್ಳೂರು ಶ್ರೀಮಹಾವಿಷ್ಣು ಕ್ಷೇತ್ರದಲ್ಲಿ ಏ.4 ರಂದು ಸಂಜೆ 5 ರಿಂದ ಪಶುದಾನ ಪುಣ್ಯಾಹ, ತಿರುವತ್ತಾಯ ಪ್ರಾರ್ಥನೆ, ಪ್ರಾಸಾದ ಶುದ್ದಿ, ವಾಸ್ತು ರಾಕ್ಷೋಘ್ನ ಹೋಮಗಳು, ವಾಸ್ತುಬಲಿ ನಡೆಯಲಿದೆ. ಸಂಜೆ 6 ರಿಂದ ಭಜನೆ, 7 ರಿಂದ ಕಾಸರಗೋಡಿನ ವಿದುಷಿಃ ಉಷಾ ಈಶ್ವರ ಭಟ್ ಅವರಿಂದ ಸಂಗೀತ ಕಚೇರಿ ನಡೆಯಲಿದೆ. ರಾತ್ರಿ 8ಕ್ಕೆ ರಾತ್ರಿ ಪೂಜೆ, 8.30 ರಿಂದ ವಿದುಷಿಃ ಮಂಜುಳಾ ಸುಬ್ರಹ್ಮಣ್ಯ ಮತ್ತು ಬಳಗ ಪುತ್ತೂರು ತಂಡದವರಿಂದ ನಾಟ್ಯರಂಜಿನಿ ಪ್ರದರ್ಶನ ನಡೆಯಲಿದೆ.
|ಏ.5 ರಂದು ಮುಂಜಾನೆ 5ಕ್ಕೆ ಉಷಃಪೂಜೆ, ಗಣಪತಿಹೋಮ, ಬಿಂಬಶುದ್ದಿ, ಕಲಶಾಭಿಷೇಕ, ಸಾನ್ನಿಧ್ಯ ಕಲಶಾಭಿಷೇಕ, ಅವಸ್ರಾವ ಪ್ರೋಕ್ಷಣ ಮೊದಲಾದ ವಿಧಿಗಳು ನಡೆಯಲಿವೆ. 9.30 ರಿಂದ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಭಜನೆ, 11 ರಿಂದ ತುಲಾಭಾರ, 12.30 ಕ್ಕೆ ಮಹಾಪೂಜೆ, 1 ಕ್ಕೆ ಅನ್ನದಾನ, ಸಂಜೆ 6 ರಿಂದ ದೀಪಾರಾಧನೆ, ತಾಯಂಬಕ, 7ಕ್ಕೆ ರಾತ್ರಿಪೂಜೆ, ಬಯಲುಕೋಲದ ಭಂಡಾರ ಆಗಮನ, 7.15 ರಿಂದ ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಅವರಿಂದ ಸಂಗೀತ ಕಚೇರಿ, 8ಕ್ಕೆ ಅನ್ನದಾನ, 9ಕ್ಕೆ ಶ್ರೀಭೂತಬಲಿ, ನೃತ್ಯೋತ್ಸವ, 11 ರಿಂದ ವಿಶೇಷ ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಏ.6 ರಂದು ಮುಂಜಾನೆ 6ಕ್ಕೆ ಉಷಃಪೂಜೆ, 9 ರಿಂದ ದರ್ಶನಬಲಿ, ರಾಜಾಂಗಣ ಪ್ರಸಾದ ವಿತರಣೆ ನಡೆಯಲಿದೆ. 11 ರಿಂದ ರಕ್ತೇಶ್ವರಿ ದೈವಕೋಲ, 12.5ಕ್ಕೆ ಮಹಾಪೂಜೆ, ಮಂತ್ರಾಕ್ಷತೆ ನಡೆಯಲಿದೆ. 12.30 ರಿಂದ ವಿಷ್ಣುಮೂರ್ತಿ ದೈವ ಕೋಲ, 1 ಕ್ಕೆ ಅನ್ನದಾನ, ಅಪರಾಹ್ನ ಗುಳಿಗಕೋಲ, ಭಂಡಾರ ನಿರ್ಗಮನದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.




-page-001.jpg)
