ಕುಂಬಳೆ: ನಾಯ್ಕಾಪಿನಲ್ಲಿರುವ ಕಾನದ ಶಾಸ್ತಾರ ಸನ್ನಿಧಿಯಲ್ಲಿ ಬಲಿವಾಡು ಕೂಟ ಹಾಗೂ ನಾರಾಯಣಮಂಗಲ ಕಿನ್ನಿಮಾಣಿ ಕಟ್ಟೆಯಲ್ಲಿ ನಲ್ವತ್ತಕ್ಕೆ ಒಂದು ಕಮ್ಮಿ ದೈವಗಳ ನೇಮ ಕಾರ್ಯಕ್ರಮ ಇಂದು(ಏ.2)ರಂದು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಇಂದು ಬೆಳಿಗ್ಗೆ 11.30ಕ್ಕೆ ನಾಯ್ಕಾಪು ಶಾಸ್ತಾವು ವನದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1 ಕ್ಕೆ ಪ್ರಸಾದ ಭೋಜನ ನಡೆಯಲಿದೆ. ಸಂಜೆ 4 ಕ್ಕೆ ವಿವಿಧ ಭಜನಾ ತಂಡಗಳಿಂದ ಭಜನೆ, 6 ಕ್ಕೆ ಮೇಣ ಮನೆಯಿಂದ ಪೂಮಾಣಿ-ಕಿನ್ನಿಮಾಣಿ ಅಂಙಣಿತ್ತಾಯ ಬೊಬ್ಬರಿಗ ದೈವದ ಭಂಡಾರ ಆಗಮನ, ಹಾಗೂ ಧೂಮಾವತೀ ದೈವಗಳ ಭಂಡಾರ ಹೊರಡುವುದು. ರಾತ್ರಿ 8ಕ್ಕೆ ದೈವಗಳ ತೊಡಂಙಲ್, 9.30 ಕ್ಕೆ ಅನ್ನದಾನ, 9.40 ರಿಂದ ಮಜಲು ಉದಯಶಂಕರ ಭಟ್ ತಂಡದವರಿಂದ ಯಕ್ಷಗಾ|ನ ತಾಳಮದ್ದಳೆ ನಡೆಯಲಿದೆ. ರಾತ್ರಿ 12 ಕ್ಕೆ ನೇಮ ಆರಂಭ, ಭಾನುವಾರ ಮುಂಜಾನೆ 6ಕ್ಕೆ ಧೂಮಾವತಿ ದೈವದ ಕೋಲ ಪ್ರಾರಂಭ, ಪ್ರಸಾದ ವಿತರಣೆ ನಡೆಯಲಿದೆ.





