ಉಪ್ಪಳ: ಶ್ರೀ ವಿಷ್ಣುಮೂರ್ತಿ, ಶ್ರೀ ವಯನಾಟ್ ಕುಲವನ್ ಶ್ರೀ ಪುದಿಯ ಭಗವತೀ ದೈವಗಳು, ಭಂಡಾರ ಹಿತ್ತಿಲು ಪಡಂಗುಡಿಯ ತೀಯ ತರವಾಡು ಮಲ್ಲಂಗೈ, ಮಂಗಲ್ಪಾಡಿ ಪ್ರತಿಷ್ಠಾ ಮಹೋತ್ಸವ ಮತ್ತು ಪರ್ವ ಮೇ.13 ಮತ್ತು 14 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ 6ರಂದು ಬೆಳಗ್ಗೆ ಗಂಟೆ 9.30ಕ್ಕೆ ಗೊನೆ ಮುಹೂರ್ತ, 13ರಂದು ಬೆಳಗ್ಗೆ 7.10 ರಿಂದ 8.10ರ ಮಧ್ಯೆ ಗುರುಹಿರಿಯರಿಂದ ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ, ಶ್ರೀ ಪುದಿಯ ಭಗವತೀ, ಶ್ರೀ ಕೊರತಿಯಮ್ಮ, ಶ್ರೀ ಗುಳಿಗ ದೈವಗಳ ಪ್ರತಿಷ್ಠೆ, ಬೆಳಗ್ಗೆ 11ಕ್ಕೆ ಮುಡಿಪು ಶುದ್ಧಿ, ಮಧ್ಯಾಹ್ನ 1 ಕ್ಕೆ ಅನ್ನಪ್ರಸಾದ ವಿತರಣೆ, ಸಂಜೆ 7. ಕ್ಕೆ ಪುತ್ತರಿ (ಪುದಿಯಡ್ಕಲ್) ರಾತ್ರಿ 10ಕ್ಕೆ ಶ್ರೀ ದೈವಗಳ ತೊಡಂಙಲ್ ನಂತರ ಅನ್ನಪ್ರಸಾದ ವಿತರಣೆ. ರಾತ್ರಿ ಗಂಟೆ 11ಕ್ಕೆ ಶ್ರೀ ಗುಳಿಗ ದೈವದ ಕೋಲ, ರಾತ್ರಿ 12.30ಕ್ಕೆ ಶ್ರೀ ಕೊರತಿಯಮ್ಮ ದೈವದ ಕೋಲ, 14 ರಂದು ಬೆಳಗ್ಗೆ 4ಕ್ಕೆ ಶ್ರೀ ವಿಷ್ಣುಮೂರ್ತಿ ದೈವ ಮತ್ತು ಶ್ರೀ ಪುದಿಯ ಭಗವತೀ ದೈವಗಳ ಕೆಂಡಸೇವೆ ಮತ್ತು ಪ್ರಸಾದ ವಿತರಣೆ, ಸಂಜೆ 7 ಕ್ಕೆ ಮರುಪುತ್ತರಿ, ರಾತ್ರಿ 8ಕ್ಕೆ ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲ ನಡೆಯಲಿದೆ.




