ಮಂಜೇಶ್ವರ: ತಲೇಕಳ ಶ್ರೀಸದಾಶಿವ ರಾಮ ವಿಠಲ ದೇಗುಲದಲ್ಲಿ ಅಕ್ಷಯ ತೃತೀಯ ಪರ್ವದ ಭಾಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಿತು.
ವರ್ಕಾಡಿ ರಮೇಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ರಮೇಶ ಅಡಿಗರ ಹಸ್ತದಲ್ಲಿ ಗಣಹೋಮ, ನವಕ ಕಲಶಾಭಿಷೇಕ, ಪಂಚಾಮೃತಾಭಿಷೇಕ, ಏಕಾದಶ ರುದ್ರಾಭಿಷೇಕ, ಅರ್ಚನೆ, ಶ್ರೀಸೂಕ್ತ ಪಠನ, ರಾತ್ರಿ ಶ್ರೀರಂಗಪೂಜೆ ನೆರವೇರಿತು. ಪರಿವಾರ ದೇವರುಗಳಿಗೆ ವಿಶೇಷ ಪೂಜೆಗಳು ನಡೆಯಿತು.
ಸಾ|ಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಶಾರದಾ ಆಚಾರ್ಯ ಅವರ ನಿರ್ದೇಶನದಲ್ಲಿ ಭರತನಾಟ್ಯ ಸಹಿತ ನೃತ್ಯ ವೈವಿಧ್ಯ, ನಾಟಕ ಪ್ರದರ್ಶನಗಳು ನಡೆಯಿತು. ರಾಮಕೃಷ್ಣ ಪ್ರಸಾದ್ ಅವರಿಂದ ಧಾರ್ಮಿಕ ಪ್ರವಚನ ನಡೆಯಿತು. ವೇದಮೂರ್ತಿ ವೆಂಕಟೇಶಮೂರ್ತಿ, ಮೊಕ್ತೇಸರ ಎಸ್.ವಾಸುದೇವ ಭಟ್, ಶ್ರೀಕಾಂತ್ ಮಾಣಿಂತಾಯ, ಲಕ್ಷ್ಮೀಶ ವಿ, ಸುಕೇಶ, ಸದಾನಂದ ಶೆಟ್ಟಿ ತಲೇಕಳ ಮೊದಲಾದವರು ನೇತೃತ್ವ ವಹಿಸಿದ್ದರು.




.jpg)
.jpg)
