ಮುಂಬೈ: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯಗಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಚೆನ್ನೈ ನೀಡಿದ 161 ರನ್ ಗಳ ಸಾವಾಲಿನ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ ರಾಯಲ್ಸ್ ತಂಡ ಯಶಸ್ವಿ ಜೈಸ್ವಾಲ್ (69ರನ್) ಮತ್ತು ಆರ್ ಅಶ್ವಿನ್ (ಅಜೇಯ 40 ರನ್) ನೆರವಿನಿಂದ 19.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಮೊಯೀನ್ (93ರನ್) ಏಕಾಂಗಿ ಹೋರಾಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160ರನ್ ಗಳಿಸಿತು. ರಾಜಸ್ಥಾನ ಪರ ಚಹಲ್ ಮತ್ತು ಮೆಕ್ ಕಾಯ್ ತಲಾ 2 ವಿಕೆಟ್ ಪಡೆದರೆ, ಅಶ್ವಿನ್ ಮತ್ತು ಬೌಲ್ಟ್ ತಲಾ 1 ವಿಕೆಟ್ ಪಡೆದರು.

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅಶ್ವಿನ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅಂತೆಯೇ ಈ ಗೆಲುವಿನ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿ ಪ್ಲೇ ಆಫ್ ಗೆ ಸ್ಥಾನ ಸಂಪಾದಿಸಿದೆ.





