ಕಾಸರಗೋಡು: ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವೆಳ್ಳಾಚ್ಚಾಲ್ ಮಾದರಿ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೆಳ್ಳಾಚ್ಚಾಲ್ ಎಂಆರ್ ಎಸ್ ನ 15ನೇ ಎಸ್ ಎಸ್ ಎಲ್ ಸಿ ಬ್ಯಾಚ್ ಇದಾಗಿದೆ. ಪ್ರತಿ ವರ್ಷ 100 ಶೇ. ಅಂಕ ಗಳಿಸುತ್ತಿದ್ದ ಶಾಲೆಯಲ್ಲಿ ಈ ಬಾರಿ 34 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಒಬ್ಬ ವಿದ್ಯಾರ್ಥಿಯು ಎಲ್ಲಾ ವಿಷಯಗಳಲ್ಲಿ ಎ + ಪಡೆದಿದ್ದಾನೆ. ಮೂವರು ಒಂಬತ್ತು ಎ ಪ್ಲಸ್ ಗ್ರೇಡ್‍ಗಳನ್ನು ಹೊಂದಿದ್ದಾರೆ. ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದರು. ಇಲಾಖೆಯ ಮಾದರಿ ವಸತಿ ಶಾಲೆಗಳು ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹುಡುಕುತ್ತಿವೆ ಮತ್ತು ಅವರಿಗೆ ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಅತ್ಯುತ್ತಮ ವಸತಿ ಸೌಕರ್ಯಗಳನ್ನು ಒದಗಿಸುತ್ತಿವೆ.
ಕಲಿಕೆಯಲ್ಲಿ ಶ್ರೇಷ್ಠತೆ ಹಾಗೂ ಕಲೆ ಮತ್ತು ಕ್ರೀಡೆಗಳಲ್ಲಿ ಸುಧಾರಿತ ತರಬೇತಿಯನ್ನು ನೀಡುತ್ತದೆ. ಶಾಲೆಯಲ್ಲಿ ಪ್ರಸ್ತುತ 180 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಎಂಟು ಎಕರೆ ವಿಸ್ತಾರವಾದ ಕ್ಯಾಂಪಸ್‍ನಲ್ಲಿ ಶಾಲೆ ಮತ್ತು ಹಾಸ್ಟೆಲ್‍ಗೆ ಆಧುನಿಕ ಸೌಲಭ್ಯಗಳೊಂದಿಗೆ ಪ್ರತ್ಯೇಕ ಕಟ್ಟಡಗಳಿವೆ. ಹೈಯರ್ ಸೆಕೆಂಡರಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಎಸ್.ಮೀನಾರಾಣಿ ಅಭಿನಂದಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 99.48ಶೇ.ಫಲಿತಾಂಶ:
ಕೇರಳದಲ್ಲಿ ಎಸ್ಸೆಸೆಲ್ಸಿ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಶೇ. 99.26 ಫಲಿತಾಂಶ ದಾಖಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಲಾ-ಕ್ರೀಡಾ ಸ್ಪರ್ಧೆಗಳು ನಡೆಯದಿರುವುದರಿಂದ ಈ ಬಾರಿ ಗ್ರೇಸ್ ಮಾರ್ಕ್ ನೀಡಿರಲಿಲ್ಲ. ಒಟ್ಟು 44363ಮಂದಿ ಎಲ್ಲ ವಿಷಯಗಳಲ್ಲೂ 'ಎ-ಪ್ಲಸ್'ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 99.48ಶೇ. ಫಲಿತಾಂಶ ದಾಖಲಾಗಿದೆ. ಕಣ್ಣೂರು ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಕಾಸರಗೋಡು ಆರನೇ ಸ್ಥಾನದಲ್ಲಿದೆ. ಜಿಲ್ಲೆಯ 162ಶಾಲೆಗಳಲ್ಲಿ 10431,<ದಿ ವಿದ್ಯಾರ್ಥಿಗಳು ಹಾಗೂ 9460ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.
ಸೆಕ್ರೆಟೇರಿಯೆಟ್‍ನ ಪಿ.ಆರ್ ಚೇಂಬರ್‍ನಲ್ಲಿ ಶಿಕ್ಷಣ ಸಚಿವ ವಿ.ಶಿವನ್‍ಕುಟ್ಟಿ ಫಲಿತಾಂಶ ಪ್ರಕಟಿಸಿದರು.ರೆಗ್ಯುಲರ್ ವಿಭಾಗದಲ್ಲಿ ಪರೀಕ್ಷೆ ಬರೆದ 4,26,469ವಿದ್ಯಾರ್ಥಿಗಳಲ್ಲಿ 4,23,303ಮಂದಿ ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ 99.47 ಶೇ. ಫಲಿತಾಂಶ ದಾಖಲಾಗಿತ್ತು. ಮರು ಮೌಲ್ಯಮಾಪನಕ್ಕಾಗಿ ಜೂ. 16ರಿಂದ 22ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೇರಳದಲ್ಲಿ ಮಾ. 31ರಿಂದ ಏ. 29ರ ವರೆಗೆ ಎಸ್ಸೆಸೆಲ್ಸಿ ಪರೀಕ್ಷೆ ನಡೆದಿತ್ತು. ಒಂದುವರೆ ತಿಂಗಳ ನಂತರ ಫಲಿತಾಂಶ ಪ್ರಕಟಗೊಂಡಿದೆ.
ಚಿತ್ರ ಮಾಹಿತಿ: ಎನ್.ವಿಜೇಶ್, ವೆಲ್ಲಾಚ್ಚಾಲ್ ಮಾದರಿ ವಸತಿ ಶಾಲೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ + ಪಡೆದ ವಿದ್ಯಾರ್ಥಿ





