HEALTH TIPS

ಪೆರಡಾಲ ಶಾಲೆಯಲ್ಲಿ ಸಾಹಿತ್ಯ ಕಮ್ಮಟ: ವಾಚನಾ ಸಪ್ತಾಹ ಆರಂಭ

              ಬದಿಯಡ್ಕ: ಪುಸ್ತಕ ಓದುವುದು ನಮ್ಮನ್ನು ಪರಿಪೂರ್ಣ ಅರಿವಿನ ಕಡೆ ಸಾಗಿಸುತ್ತದೆ. ವಾಚನಾ ದಿನ ಇದಕ್ಕೆ ಪ್ರೇರೇಪಿಸಬೇಕು ಎಂದು ನಿವೃತ್ತ ಶಿಕ್ಷಕ ಕೃಷ್ಣೋಜಿ ರಾವ್ ಅವರು ನುಡಿದರು. 

                  ಪೆರಡಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ವಾಚನಾ ಸಪ್ತಾಹ ಅಂಗವಾಗಿ ಏರ್ಪಡಿಸಿದ ಸಾಹಿತ್ಯ ರಚನಾ ಕಮ್ಮಟ ಉದ್ಘಾಟಿಸಿ ಮಾತನಾಡುತ್ತಿದ್ದರು.

      ಉತ್ತಮ ಕೃತಿಗಳು ಜ್ಞಾನದ ಬೆಳಕನ್ನು ನೀಡುತ್ತದೆ. ವಿಸ್ತಾರವಾದ ವಿಷಯ ಪ್ರಪಂಚದ ಒಂದಷ್ಟು ಮಾಹಿತಿಗಳನ್ನು ಅರಿತುಕೊಳ್ಳುವ ಉತ್ಸಾಹ ನಿತ್ಯ ನಮ್ಮಲ್ಲಿರಬೇಕು. ಇದನ್ನು ಪುಸ್ತಕಗಳು ಒದಗಿಸುತ್ತದೆ. ಆಧುನಿಕ ಯುಗದಲ್ಲಿ ವೈಜ್ಞಾನಿಕ ಕ್ರಾಂತಿಯ ಕಾರಣ ಓದುವ ವ್ಯವಸ್ಥೆ ಬದಲಾಗಿದ್ದರೂ, ಪೂರ್ಣ ಪ್ರಮಾಣದ ಸಂತೃಪ್ತಿ ಪುಸ್ತಕದ ನೇರ ಓದಿನಿಂದ ಮಾತ್ರ ಸಾಧ್ಯ ಎಂದವರು ತಿಳಿಸಿದರು.  

            ಅಧ್ಯಕ್ಷತೆವಹಿಸಿದ ಮುಖ್ಯ ಶಿಕ್ಷಕ ರಾಜಗೋಪಾಲ್ ಅವರು ಪಿ. ಎ ನ್. ಪಣಿಕ್ಕರ್ ಅವರ ಪರಿಚಯ ಮಾಡಿ ಓದುವಿಕೆಯ ಮಹತ್ವ ವಿವರಿಸಿದರು. ಕೃಷ್ಣೋಜಿ ಅವರು ಓದುವಿಕೆ, ಪುಸ್ತಕ ಪರಿಚಯ, ಕವನ ಹಾಡುವುದು, ಬರವಣಿಗೆ ಬಗ್ಗೆ ವಿವರವಾದ ತರಗತಿ ನಡೆಸಿದರು. ಶಿಕ್ಷಕ ಶ್ರೀಧರ ಭಟ್ ಸ್ವಾಗತಿಸಿ, ಜಯಲತಾ ವಂದಿಸಿದರು. ರಾಜೇಶ್ ಉಬ್ರಂಗಳ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries