ಕಾಸರಗೋಡು: ಮುಳಿಯಾರ್ ಆಲನಡ್ಕ ನಿವಾಸಿ ಹಾಗೂ ಚೆರ್ಕಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಶುಹೈಲಳ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಅರ್ತಿಪಳ್ಳ ನೆಕ್ರಾಜೆ ಮೂಲದ ಮುಳಿಯಾರ್ ಮೂಲಡ್ಕದಲ್ಲಿ ವಾಸಿಸುವ ಇಚ್ಚಾಸ್ ಅಲಿಯಾಸ್ ಮುಹಮ್ಮದ್ ಇರ್ಷಾದ್ ಎಂಬಾತನನ್ನು ಆದೂರು ಪೋಲೀಸರು ಬಂಧಿಸಿದ್ದಾರೆ. ಪೋಲೀಸರ ವಿರುದ್ಧ ತೀವ್ರ ಪ್ರತಿಭಟನೆಗೆ ಕುಟುಂಬ ಮತ್ತು ಕ್ರಿಯಾ ಸಮಿತಿ ಮುಂದೆ ಬಂದ ನಂತರ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬೋವಿಕ್ಕಾನ ಆಲನಡ್ಕ ಮಹ್ಮದ್ ಮತ್ತು ಆಯೇಷಾ ದಂಪತಿಯ ಪುತ್ರಿ ಶುಹೈಲಾ ಮಾ.30ರಂದು ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಚೆರ್ಕಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದಳು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಶುಹೈಲಾ ಸಾವಿನ ಹಿಂದಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರಬಲ ಮುಷ್ಕರ ನಡೆಸಿದ ನಂತರ ಪೆÇಲೀಸರು ತನಿಖೆಯನ್ನು ತೀವ್ರಗೊಳಿಸಿದರು.
ಶುಹೈಲಾಗೆ ದೂರವಾಣಿ ಮೂಲಕ ನಿರಂತರವಾಗಿ ಕಿರುಕುಳ ನೀಡಿದ ಯುವಕರ ಮಾಹಿತಿ ಹಾಗೂ ಸಾಕ್ಷಿಗಳ ನಿಖರ ರಹಸ್ಯ ಹೇಳಿಕೆಗಳ ಆಧಾರದ ಮೇಲೆ ತನಿಖೆ ಪ್ರಗತಿಯಲ್ಲಿದೆ. ಅಡೂರು ಎಸ್‍ಐ ಎ ಅನಿಲಕುಮಾರ್, ಸಿಪಿಒ ಚಂದ್ರನ್ ನಾಯರ್, ಎಎಸ್‍ಐ ಮಧುಸೂದನನ್ ಮತ್ತು ಸಿಪಿಒ ಅಜಯ್ ವಿಲ್ಸನ್ ಅವರನ್ನೊಳಗೊಂಡ ಪೋಲೀಸ್ ತಂಡ ಆರೋಪಿಯನ್ನು ಬಂಧಿಸಿದೆ. ಶುಹೈಲಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಯುವಕರ ಬಗ್ಗೆ ಮನೆಯವರು ಪೋಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ಪೆÇಲೀಸರು ಬಂಧಿಸುವಲ್ಲಿ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಕ್ರಿಯಾ ಸಮಿತಿಯು ಅಹೋರಾತ್ರಿ ಧರಣಿ ನಡೆಸಲು ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ. ಪೋಕ್ಸೊ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಯುವಕನನ್ನು ಬಂಧಿಸಲಾಗಿದೆ.




.webp)
