ಕಾಸರಗೋಡು: ಟೀಚರ್ಸ್ ಸ್ಪೋಟ್ರ್ಸ್ ಕೌನ್ಸಿಲ್(ಟಿಎಸ್‍ಸಿ) ಕಾಸರಗೋಡು ಇದರ ಮಹಾಸಭೆ ಪೆರ್ಮುದೆ ಶಾಲೆಯಲ್ಲಿ ಜರಗಿತು. ಅಧ್ಯಕ್ಷ ಉದಯ ಸಾರಂಗ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರರಾದ ಪ್ರಶಾಂತ್ ರೈ ಮಾಸ್ಟರ್, ಸದಾಶಿವ ಮಾಸ್ಟರ್ ಉಪಸ್ಥಿತರಿದ್ದರು. ವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಅಮೃತ ಮಹೋತ್ಸವ ಕ್ರಿಕೆಟ್ ಪಂದ್ಯಾಟವನ್ನು ನಡೆಸಲು ತೀರ್ಮಾನಿಸಲಾಯಿತು. ಕಾರ್ಯದರ್ಶಿ ರಘುವೀರ್ ರಾವ್ ವಾರ್ಷಿಕ ವರದಿ, ಕೋಶಧಿಕಾರಿ ಅಶೋಕ್ ಮಾಸ್ಟರ್ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸದಾಶಿವ ಬಾಲಮಿತ್ರ ಅಧ್ಯಕ್ಷ, ರಘವೀರ್ ಮೀಯಪದವು, ಮಿಥುನ್ ಸ್ವರ್ಗ, ಅಶೋಕ್ ಕೊಡ್ಲಮೊಗೆರು ಉಪಾಧ್ಯಕ್ಷರು, ನಿರಂಜನ್ ರೈ ಪೆರಡಾಲ ಪ್ರಧಾನ ಕಾರ್ಯದರ್ಶಿ, ಹರಿನಾಥ್, ಪೂರ್ಣ ಚಂದ್ರ , ಸುನೀಲ್ ಕುಮಾರ್ ಮುಂಡಿತ್ತಡ್ಕ ಕಾರ್ಯದರ್ಶಿಗಳು, ಉದಯ ಸಾರಂಗ್, ಉದಯ ಶೆಟ್ಟಿ, ಮತ್ತು ಪ್ರಶಾಂತ್ ರೈ ಗೌರವಾಧ್ಯಕ್ಷರು,
ಪ್ರದೀಪ್ ಶೆಟ್ಟಿ ಬೇಳ ಕೋಶಾಧಿಕಾರಿ, ಶಾಮ್ ರಂಜಿತ್ ಐ.ಟಿ ಸಂಚಾಲಕ, ಗುರುರಾಜ್ ,ತೌಸೀಪ್ ಅವರನ್ನು ಸಂಯೋಜಕರಾಗಿ ಆಯ್ಕೆ ಮಾಡಲಾಯಿತು. ನೂತನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ವಂದಿಸಿದರು.
ಚಿತ್ರ ಮಾಹಿತಿ: ಸದಾಶಿವ ಬಾಲಮಿತ್ರ(ಅಧ್ಯಕ್ಷ)





