ಕಾಸರಗೋಡು: ಜನಪರ ಯೋಜನಾ ರಜತ ಮಹೋತ್ಸವದ ಅಂಗವಾಗಿ ಮಡಿಕೈ ಪಂಚಾಯಿತಿಯ "ನಾವು ಮುಂದಕ್ಕೆ' ಎಂಬ ಅಭಿವೃದ್ದಿ ದಾಖಲೆಯನ್ನು ಪಂಚಾಯಿತಿ ಇಲಾಖೆ ನಿರ್ದೇಶಕ ಎನ್. ದಿನೇಶ್ ಬಿಡುಗಡೆಗೊಳಿಸಿದರು. ಮಡಿಕೈ ಪಂಚಾಯಿತಿಯ ಹಿರಿಯ ರೈತ ಕಮ್ಯುನಿಸ್ಟ್ ಮುಖಂಡ ಕಾಞÂರಕ್ಕಲ್ ಕುಞÂರಾಮನ್ ಅಭಿವೃದ್ಧಿ ದಾಖಲೆ ಸ್ವೀಕರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಎ.ಅಬ್ದುಲ್ ರೆಹಮಾನ್, ವಿ.ಕುಟ್ಟಿಯಾನ್, ಮಡತ್ತನಾಡ್ ರಾಜನ್, ಕೆ.ಸುಜಾತ, ಬಿ.ಬಾಲನ್, ರಮಾಪದ್ಮನಾಭನ್, ಟಿ.ರಾಜನ್, ಪಿ.ಸತ್ಯ, ಕೆ.ವಿ.ಪ್ರಮೋದ್ ಉಪಸ್ಥಿತರಿದ್ದರು. ಪಂಚಾಯಿತಿ ಉಪಾಧ್ಯಕ್ಷ ವಿ.ಪ್ರಕಾಶ್ ಸ್ವಾಗತಿಸಿದರು. ದಿನೇಶ ಪರಾಯಿಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಪಂಚಾಯಿತಿಯಲ್ಲಿ ಶೇ.100ರಷ್ಟು ಯಶಸ್ಸು ಸಾಧಿಸಿದ ಶಾಲೆಗಳಗೆ ಅಭಿನಂದನೆ ಸಲ್ಲಿಸಲಾಯಿತು.





