ಕಾಸರಗೋಡು: ಶಿಕ್ಷಣ ಒಂದು ಹಕ್ಕು-ಔದಾರ್ಯವಲ್ಲ ಎಂಬ ಘೋಷಣೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಜುಲೈ 12ರಂದು ನಡೆಯಲಿದೆ. ವೆಲ್ಫೇರ್ ಪಾರ್ಟಿ ರಾಜ್ಯ ಉಪಾಧ್ಯಕ್ಷ ರಜಾಕ್ ಪಾಲೇರಿ ಉದ್ಘಾಟಿಸುವರು ಎಂದು ಫ್ರೆಟರ್ನಿಟಿ ಮೂವ್‍ಮೆಂಟ್ ಜಿಲ್ಲಾಧ್ಯಕ್ಷ ಸಿ.ಎ.ಯೂಸುಫ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಪ್ಲಸ್ ಒನ್‍ನ ಹೊಸ ಬ್ಯಾಚ್‍ಗಳಿಗೆ ಅವಕಾಶ ನೀಡುವುದು, ಎಸ್ಸೆಸೆಲ್ಸಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಪ್ಲಸ್ ಒನ್ ಅಧ್ಯಯನಕ್ಕೆ ಬೇಕಾದ ಸೀಟುಗಳ ಖಾತ್ರಿಪಡಿಸುವುದು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟನ್ನು ಪರಿಹರಿಸುವುದು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಯಲಿದೆ. ಧರಣಿಗೆ ಮೊದಲು ಸರ್ಕಾರಿ ಕಾಲೇಜು ವಠಾರದಿಂದ ಮೆರವಣಿಗೆ ನಡೆಯುವುದು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಅಶ್ರಫ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಜಿಲ್ಲಾ ಕೋಶಾಧಿಕಾರಿ ಅಂಬುಂಜಿ ತಳಕಾಯಿ, ಫ್ರೆಟರ್ನಿಟಿ ಮೂವ್‍ಮೆಂಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪೆರಿಯ, ರಶೀದ್ ಮುಹಿಯುದ್ದೀನ್, ಜಿಲ್ಲಾ ಸಮಿತಿ ಸದಸ್ಯರಾದ ರಾಸಿಖ್ ಮಂಜೇಶ್ವರಂ, ಇಬಾದ ಅಶ್ರಫ್, ಶಹಬಾಝ್ ಕೋಲಿಯಾಟ್ ಉಪಸ್ಥಿತರಿದ್ದರು.




