ಕಾಸರಗೋಡು: ಕೂಡ್ಲು ಪಾಯಿಚ್ಚಾಲ ಚೈತನ್ಯ ವಿದ್ಯಾಲಯ ಋಷಿಕ್ಷೇತ್ರದಲ್ಲಿ ಗುರುಪೂರ್ಣಿಮೆ/ವ್ಯಾಸ ಜಯಂತಿ ಕಾರ್ಯಕ್ರಮ ನಿನ್ನೆ ನಡೆಯಿತು. ನಿವೃತ್ತ ಮುಖ್ಯೋಪಾಧ್ಯಾಯಿನಿ ಹಾಗು ಸಮಾಜ ಸೇವಕಿ ಸವಿತ ಕೆ ವಿದ್ಯಾನಗರ ಹಾಗು ನಿವೃತ್ತ ಅಧ್ಯಾಪಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಗೈಯ್ಯುತ್ತಿರುವ ಕಮಲಾಕ್ಷ ಕೆ ಮಂಗಳೂರು ಇವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾಲಯ ಪ್ರಾಂಶುಪಾಲ ಪಿ ರವಿಚಂದ್ರನ್ ಸ್ವಾಗತಿಸಿದರು. ವಿದ್ಯಾಲಯ ಪ್ರಬಂಧಕ ನಾಗೇಶ್ ಬಿ ಗುರುಪೂರ್ಣಿಮೆಯ ಮಹತ್ವದ ಕುರಿತು ಮಾತನಾಡಿದರು. ವಿದ್ಯಾಲಯ ಆಡಳಿತಾಧಿಕಾರಿ ರಮೇಶ ಕೆ, ಚೈತನ್ಯ ಟ್ರಸ್ಟ್ ಕಾರ್ಯದರ್ಶಿ ಮೋಹನ ಎಂ, ಟ್ರಸ್ಟಿಗಳಾದ ಮಾಧವ ಭಟ್, ಶಿಶುವಿಹಾರದ ಮುಖ್ಯಸ್ಥೆ ರೂಪ ಕೆ.ಪಿ ಉಪಸ್ಥಿತರಿದ್ದರು. ವಿದ್ಯಾಲಯ ಮುಖ್ಯೋಪಾಧ್ಯಾಯಿನಿ ಹೇಮಾವತಿ ಜೆ ಆಚಾರ್ಯ ವಂದಿಸಿದರು. ಅಧ್ಯಾಪಿಕೆ ಪುಷ್ಪಲತ ಎಸ್ ಎಂ ಕಾರ್ಯಕ್ರಮ ನಿರೂಪಿಸಿದರು.





