ಕಾಸರಗೋಡು: ನವಕೇರಳ ಕ್ರಿಯಾಯೋಜನೆಯಲ್ಲಿ ಇಂಟರ್ನ್‍ಶಿಪ್ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪರಿಸರ ವಿಜ್ಞಾನ, ಜಿಯೋಲಜಿ/ಅರ್ಥ್ ಸೈನ್ಸ್, ಸಮಾಜಶಾಸ್ತ್ರ, ಸಮಾಜ ಕಾರ್ಯ, ಬೋಟನಿ, ಮುಂತಾದುಗಳಲ್ಲಿ, ಸ್ನಾತಕೋತ್ತರ ಪದವಿಯವರಿಗೂ, ಸಿವಿಲ್ ಇಂಜಿನಿಯರಿಂಗ್, ಕೃಷಿ ಮುಂತಾದುಗಳಲ್ಲಿ ಪದವೀದರರಿಗೆ ಅಥವಾ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪಿಜಿ ಡಿಪೆÇ್ಲೀಮಾ ಪಾಸಾದವರಿಗೂ ಅರ್ಜಿ ಸಲ್ಲಿಸಬಹುದು.
ಅವಧಿ 6 ತಿಂಗಳು. ವಯೋಮಿತಿ ಗರಿಷ್ಠ 27 ವರ್ಷ. ಆಯ್ಕೆಯಾದವರು 14 ಜಿಲ್ಲಾ ಮಿಷನ್ ಕಛೇರಿ ಮತ್ತು ನವಕೇರಳ ಕ್ರಿಯಾ ಯೋಜನೆಯ ರಾಜ್ಯ ಕಛೇರಿಯೊಂದಿಗೆ ಸೇರಿ ಕೆಲಸ ಮಾಡಬೇಕು. ಆಯಾ ಕ್ಷೇತ್ರಗಳ ತಜ್ಞರಿಂದ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ಮತ್ತು ಸರ್ಕಾರದಿಂದ ಅನುಮೋದಿಸಲ್ಪಟ್ಟ ಮಾಸಿಕ ಸ್ಟೈಫಂಡ್ ನೀಡಲಾಗುವುದು. ಆಯ್ಕೆಯು ಸಂದರ್ಶನವನ್ನು ಆಧರಿಸಿಯಾಗಿದೆ. ಅರ್ಜಿ ಸಲ್ಲಿಸವ ವೆಬ್‍ಸೈಟ್ www.careers.haritham.kerala.
ದೂರವಾಣಿ 0471 2449939.





