ಉಪ್ಪಳ: ಶ್ರೀನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಜು. 13 ಬುಧವಾರ ವ್ಯಾಸಪೂರ್ಣಿಮೆಯ ಪವಿತ್ರದಿನ ಶ್ರೀಮಠದಲ್ಲಿಯೇ ತಮ್ಮ 18ನೇ ಚಾತುರ್ಮಾಸ್ಯವನ್ನು ಆರಂಭಿಸಲಿದ್ದಾರೆ. ಆದಿನ ಬೆಳಿಗ್ಗೆ 8.00ಕ್ಕೆ ಗಣಹೋಮ, 9.00ಕ್ಕೆ ಭಗವಾನ್ ಶ್ರೀ ನಿತ್ಯಾನಂದ ಗುರುದೇವರಿಗೆ ಸೀಯಾಳಾಭಿಷೇಕ, 11.ಕ್ಕೆ ವ್ಯಾಸಹವನ ನಂತರ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಶ್ರೀ ಗುರು ಪಾದುಕಾ ಪೂಜೆ ಮತ್ತು ಶ್ರೀಗಳವರಿಂದ ಸತ್ಸಂಗ ನಡೆಯಲಿದೆ.ಸೆ 10 ರವರೆಗೆ ನಡೆಯುವ ಚಾತುರ್ಮಾಸ್ಯ ಸಂದರ್ಭದಲ್ಲಿ ಪ್ರತೀ ವಾರ ವಿವಿಧ ವಿದ್ವಾಂಸರುಗಳಿಂದ ಪ್ರವಚನಗಳನ್ನು ಆಯೋಜಿಸಿದೆ. ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ. ಭಕ್ತಾದಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಗುರು ಕೃಪೆಗೆ ಪಾತ್ರರಾಗಬೇಕಾಗಿ ಶ್ರೀಮಠದ ಆಡಳಿತಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿಕೊಂಡಿದ್ದಾರೆ.




