ಕಾಸರಗೋಡು: ಮುಂಗಾರು ಮಳೆಗೆ ಜಿಲ್ಲೆಯಲ್ಲಿ 40.7 ಹೆಕ್ಟೇರ್ ಕೃಷಿನಾಶಗೊಂಡಿದ್ದು, 211.89 ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ. ಮುಂಗಾರು ಮಳೆಯಿಂದ 1,112 ರೈತರಿಗೆ ಕೃಷಿ ಹಾನಿಯುಂಟಾಗಿದೆ. ಬಾಳೆ ಕೃಷಿಯಲ್ಲಿ ಹೆಚ್ಚಿನ ನಷ್ಟವಾಗಿದೆ. 6.64 ಹೆಕ್ಟೇರ್‍ನಲ್ಲಿ 299 ರೈತರಿಗೆ ಸೇರಿದ 16,579 ಬಾಳೆ ಗೊನೆಗಳು ನಾಶವಾಗಿದ್ದು, ಇದಕ್ಕೆ 99.47 ಲಕ್ಷ ನಷ್ಟ ಅಂದಾಜಿಸಲಾಗಿದೆ. 3.45 ಹೆಕ್ಟೇರ್‍ನಲ್ಲಿ ಬೆಳೆಸಲಾದ 7625 ಬಾಳೆ ಗಿಡಗಳು ನಾಶವಾಗಿವೆ. 30.50 ಲಕ್ಷ ನಷ್ಟ ಉಂಟಾಗಿದೆ.
11.92 ಹೆಕ್ಟೇರ್‍ನಲ್ಲಿ 4946 ಸೋರೆಕಾಯಿ ನಾಶವಾಗಿದೆ. ನಷ್ಟ ಅಂದಾಜು 14.82 ಲಕ್ಷ ರೂ.
ಮುಂಗಾರು ಮಳೆಗೆ 12.69 ಹೆಕ್ಟೇರ್‍ನಲ್ಲಿ 917 ತೆಂಗಿನ ಮರಗಳು ನಾಶವಾಗಿದ್ದು, 45.85 ಲಕ್ಷ ರೂ. ನಷ್ಟ ಉಂಟಾಗಿದೆ. ಮಲೆನಾಡು ಪ್ರದೇಶದಲ್ಲಿ ಟ್ಯಾಪಿಂಗ್ ನಡೆಸುವ 950 ರಬ್ಬರ್ ಮರಗಳು ನಾಶವಾಗಿವೆ. 4.50 ಹೆಕ್ಟೇರ್‍ನಲ್ಲಿ ಬೆಳೆನಾಶವುಂಟಾಗಿದ್ದು, 19 ಲಕ್ಷ ರೂ.ನಷ್ಟ ಸಂಭವಿಸಿದೆ. ಸುಮಾರು ಒಂದು ಹೆಕ್ಟರ್ ವ್ಯಾಪ್ತಿಯಲ್ಲಿ 150 ಗೋಡಂಬಿ ಮರಗಳು ನಾಶವಾಗಿದ್ದು, 1.50 ಲಕ್ಷ ನಷ್ಟವಾಗಿದೆ ಎಂದು ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆ ಅಂದಾಜಿಸಿದೆ.
ನೀಲೇಶ್ವರಂ ಬ್ಲಾಕ್‍ನಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆ ಹಾನಿ ಉಂಟಾಗಿದೆ. 19.37 ಹೆಕ್ಟೇರ್ ಪ್ರದೇಶದ 370 ರೈತರಿಗೆ 144.5 ಲಕ್ಷ ರಊ. ಮೌಲ್ಯದ ಬೆಳೆ ಹಾನಿ ಉಂಟಾಗಿದೆ. ಮಂಜೇಶ್ವರ ಬ್ಲಾಕ್‍ನಲ್ಲಿ 15.10 ಹೆಕ್ಟೇರ್‍ನಲ್ಲಿ 8.87 ಲಕ್ಷ ರೂ., ಕಾಞಂಗಾಡು ಬ್ಲಾಕ್‍ನಲ್ಲಿ 4.18 ಹೆಕ್ಟೇರ್‍ನಲ್ಲಿ 46.54 ಲಕ್ಷ ರೂ., ಕಾಸರಗೋಡು ಬ್ಲಾಕ್ ನಲ್ಲಿ 1.42 ಹೆಕ್ಟೇರ್ ನಲ್ಲಿ 9.12 ಲಕ್ಷ ರೂ., ಕಾರಡ್ಕ ಬ್ಲಾಕ್‍ನಲ್ಲಿ 0.34 ಹೆಕ್ಟೇರ್ ನಲ್ಲಿ 1 ಲಕ್ಷ ರೂ. ಮೊತ್ತದ ಬೆಳೆಹಾನಿಯುಂಟಾಗಿದೆ.
ಫೋಟೋ ಮುಂಗಾರು ಮಳೆಯಿಂದ ಹಾನಿಗೀಡಾದ ಪ್ರದೇಶಕ್ಕೆ ಕೃಷಿ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿದರು.





