ಕೊಂಡೆವೂರಲ್ಲಿ ವನಸುಮ – ಕಾವ್ಯ ಮೃಷ್ಠಾಹ್ನ ಪುಸ್ತಕಗಳ ಬಿಡುಗಡೆ: ಗೀತಾಭಿಯಾನ ಉದ್ಘಾಟನೆ
0
ಆಗಸ್ಟ್ 09, 2022
ಉಪ್ಪಳ : ಕಲಾಕುಂಚ ಗಡಿನಾಡ ಘಟಕ ಕೇರಳ ಶಾಖೆಯ ಸಹಯೋಗದೊಂದಿಗೆ ಲಕ್ಷ್ಮೀ ವಿ ಭಟ್ ಅವರ ಎರಡು ಕವನ ಸಂಗ್ರಹಗಳು - ವನಸುಮ ಮತ್ತು ಕಾವ್ಯ ಮೃಷ್ಠಾಹ್ನ ಕೊಂಡೆವೂರು ಶ್ರೀಮಠದ ನಿತ್ಯಾನಂದ ಮಂದಿರದಲ್ಲಿ ಲೋಕಾರ್ಪಣೆಗೊಂಡುವು. ಪ್ರಸನ್ನ ಸಿ ಎಸ್ ಭಟ್ ಕಾಕುಂಜೆ ಅವರ ಪ್ರಾರ್ಥನೆಯ ಬಳಿಕ ಕೃತಿಗಳ ಕವಯಿತ್ರಿ ಲಕ್ಷ್ಮೀ ವಿ ಭಟ್ ಆಶಯ ನುಡಿಗಳನ್ನು ಆಡಿದರು. ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪ ಪ್ರಜ್ವಲನ ಮಾಡಿ ಗೀತಾಭಿಯಾನದ ಉದ್ಘಾಟನೆ ಮಾಡಿದರು. ಬಳಿಕ ವಿದ್ಯಾಧರ ಕನ್ನಡ ಪ್ರತಿμÁ್ಠನ ಮುಂಬೈ-ಧಾರವಾಡ ಆಯೋಜಿತ ರಾಷ್ಟ್ರಮಟ್ಟದ ಕವನ ಸಂಕಲನ 2022 ಸ್ಪರ್ಧೆಯಲ್ಲಿ ಬಹುಮಾನಿತ ಕೃತಿ "ವನಸುಮ" ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದರು.
ಸಮಾರಂಭದಲ್ಲಿ ಯೋಗೀಶರಾವ್ ಚಿಗುರುಪಾದೆಯವರು ಕೃತಿಯ ಅವಲೋಕನ ಮಾಡಿದರು. ಶಿಕ್ಷಣ ತಜ್ಞ ವಿ ಬಿ ಕುಳಮರ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇನ್ನೊಂದು ಕೃತಿ "ಕಾವ್ಯ ಮೃμÁ್ಟನ"ವನ್ನು ಲೋಕಾರ್ಪಣ ಮಾಡಿ ಅವಲೋಕನ ಮಾಡಿದರು. ಮುಖ್ಯ ಅತಿಥಿಗಳಾಗಿ ಡಾ ಕೊಳ್ಚಪ್ಪೆ ಗೋವಿಂದ ಭಟ್, ಡಾ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಶುಭ ಹಾರೈಸಿದರು. ಕಲಾಕುಂಚ ಕೇರಳ ಶಾಖೆಯ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ ಶುಭಾಶಂಸನೆಗೈದರು. ಗೀತಾ ಅಭಿಯಾನದ ಅಂಗವಾಗಿ ಶಿಕ್ಷಕ ಸುಬ್ರಹ್ಮಣ್ಯ ಭಟ್ ಭಗವದ್ಗೀತೆಯ ಆಯ್ದ ಶ್ಲೋಕಗಳನ್ನು ವಾಚಿಸಿದರು.
ಗಮಕಿ ಗಣಪತಿ ಭಟ್ ಪೆರ್ಮುಖ, ದಿವಾಕರ ಬಲ್ಲಾಳ, ಪ್ರಸನ್ನ ಸಿ ಎಸ್ ಭಟ್ ಕಾಕುಂಜೆ, ದಿವ್ಯ ಚಂದನ್ ಕಾರಂತ ಮತ್ತು ರಾಧಾಮಣಿ ಆರ್ ರಾವ್ ಲೋಕಾರ್ಪಣಗೊಂಡ ಕೃತಿಗಳ ಗಾಯನ ಮಾಡಿದರು. ಶಿಕ್ಷಕ ದಿವಾಕರ ಬಲ್ಲಾಳ್ ಸ್ವಾಗತಿಸಿ, ಕಾರ್ತಿಕ ಪಡ್ರೆ ವಂದಿಸಿದರು. ಶಿಕ್ಷಕ ರಾಜಾರಾಮರಾವ್ ನಿರೂಪಣೆ ಮಾಡಿದರು.

.jpg)
