ಬದಿಯಡ್ಕ: ಯುದ್ಧವು ಮನುಕುಲದ ಶಾಪ. ಒಂದೆಡೆ ಯುದ್ಧ ಸಂಭವಿಸಿದರೆ ಇಡೀ ಜಗತ್ತಿಗೆಲ್ಲ ಅದರಿಂದ ಹಾನಿಯಾಗುವುದು. ಜಗತ್ತಿನಲ್ಲಿ ಶಾಂತಿ ಸಮಾಧಾನ ಸದಾ ನೆಲೆಸಿದಾಗ ಅಭಿವೃದ್ಧಿ ಸಾಧ್ಯ ಎಂದು ಪೆರಡಾಲ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಾಜಗೋಪಾಲ ಅವರು ನುಡಿದರು.
ಶಾಲೆಯ ಹಿರೋಷಿಮ, ನಾಗಸಾಕಿ ದಿನಾಚರಣೆಯ ಸಂದರ್ಭ ಅವರು ಮಾತನಾಡುತ್ತಿದ್ದರು.
ಯುದ್ಧ ವಿರೋದಿ ಪೋಸ್ಟರ್, ಭಾಷಣ, ಪ್ರತಿಜ್ಞೆ ನಡೆಸಲಾಯಿತು. ಚಿನ್ಮಯಕೃಷ್ಣ, ಸಜಾ ಫಾತಿಮ ಕಾರ್ಯಕ್ರಮ ನೀಡಿದರು. ಯುದ್ಧದ ಆಘಾತಕ್ಕೆ ಸಿಲುಕಿ, ಪೇಪರ್ ಕೊಕ್ಕರೆಯ ತಯಾರಿಸುವ ಹವ್ಯಾಸ ಬೆಳೆಸಿದ ಕೊನೆಗೆ ಬಲಿಯಾದ ಸಡಾಕೋ ಸಜಾಕಿ ನೆನಪಿನಲ್ಲಿ ಪೇಪರ್ ಕೊಕ್ಕರೆಯ ಪ್ರತಿಕೃತಿ ನಿರ್ಮಿಸಿ ಪ್ರದರ್ಶನ ನಡೆಸಲಾಯಿತು. ವಿಶ್ವ ಶಾಂತಿಯ ಸಂದೇಶ ಸಾರಲಾಯಿತು. ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಶ್ರೀಧರನ್ ವಂದಿಸಿದರು.

.jpg)
.jpg)
