HEALTH TIPS

ಸೇವಾಭಾರತಿ ನೀರ್ಚಾಲು ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ


                 ಬದಿಯಡ್ಕ: ಇಂದು ಸಮಾಜದಲ್ಲಿನ ಅತೀ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಆರ್ಥಿಕ ಸಹಾಯ, ಆರೋಗ್ಯ ಸಹಾಯ, ವಸತಿ ನಿರ್ಮಾಣ, ಶುಚೀಕರಣ ಮೊದಲಾದ ಸೇವೆಗಳೊಂದಿಗೆ "ಜನರ ಸೇವೇಯೇ ಜನಾರ್ಧನ ಸೇವೆ" ಎಂಬ ಮಾತಿನಂತೆ ನೋವಿನಲ್ಲಿರುವವರಿಗೆ ಸಾಂತ್ವನ ನೀಡುತ್ತಿರುವ ಸೇವಾಭಾರತಿ ನೀರ್ಚಾಲು ಘಟಕದ    ಮಹಾಸಭೆ ಇತ್ತೀಚೆಗೆ ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ಸದಾಶಿವ ಮಾಸ್ತರ್ ಅಧ್ಯಕ್ಷತೆಯಲ್ಲಿ ಜರಗಿತು. ಬಾಲಕೃಷ್ಣ ಏಣಿಯರ್ಪು, ರಾಮಕೃಷ್ಣ ಹೆಬ್ಬಾರ್ ಮಾತನಾಡಿದರು. ಪ್ರದೀಪ್ ಮಾಸ್ತರ್ ವಾರ್ಷಿಕ ವರದಿ ಮಂಡಿಸಿದರು. ಬಾಲಸುಬ್ರಹ್ಮಣ್ಯ ಭಟ್ ಆಯವ್ಯಯ ಮಂಡಿಸಿದರು.
           ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸದಾಶಿವ ಮಾಸ್ತರ್ ಬೇಳ, ಉಪಾಧ್ಯಕ್ಷರಾಗಿ ಬಾಲಗೋಪಾಲ ಏಣಿಯರ್ಪು, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಮಾಸ್ತರ್ ಬೇಳ, ಕಾರ್ಯದರ್ಶಿಯಾಗಿ ರಮೇಶ ಕಳೇರಿ ಬೇಳ,  ಕೋಶಾಧಿಕಾರಿಯಾಗಿ ಬಾಲಸುಬ್ರಹ್ಮಣ್ಯ ಭಟ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಮಕೃಷ್ಣ ಹೆಬ್ಬಾರ್, ಬಾಲಕೃಷ್ಣ ಮಲ್ಲಡ್ಕ, ಶಶಿಧರ ಏಣಿಯರ್ಪು, ಅಜಿತ್ ಕುಮಾರ್ ಏಣಿಯರ್ಪು,ಅಜಿತ್ ಬಿ ನೀರ್ಚಾಲು, ಸತೀಶ ಏಣಿಯರ್ಪು, ಶಿವರಾಮ ಮೊಳೆಯಾರು, ಮೋಹನ ಸಿ.ಎಚ್, ಬಾಲಕೃಷ್ಣ ಏಣಿಯರ್ಪು, ಪ್ರಕಾಶ್ ಕುಲಾಲ್, ಹರೀಶ ಎ.ಡಿ, ರಾಧಾಕೃಷ್ಣ ಏಣಿಯರ್ಪು, ನವೀನ ಏಣಿಯರ್ಪು, ಶಂಕರ ಡಿ, ಗಣೇಶ್ ಕೃಷ್ಣ ಅಳಕ್ಕೆ, ಮಧುಚಂದ್ರ ಮಾನ್ಯ, ಹರಿಪ್ರಿಯ ಚುಕ್ಕಿನಡ್ಕ, ಮಹೇಶ್ ವಳಕುಂಜ ಮೊದಲಾದವರನ್ನು ಆರಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries