HEALTH TIPS

ಅಮೆರಿಕಾಗೆ ತೆರಳಬೇಕಾದವರು ವೀಸಾಗಾಗಿ ಕಾಯಬೇಕಾದ ಅವಧಿ ಒಂದೂವರೆ ವರ್ಷ!

               ದೆಹಲಿ: :ಅಮೆರಿಕಾಗೆ ತೆರಳಲು ಬಯಸುವವರು ವಿಸಿಟರ್ ವೀಸಾಗೆ (Visitor Visa) 2024 ರ ತನಕ ಕಾಯಬೇಕಾದೀತೆಂಬ ಅಂಶ ಬಹಿರಂಗಗೊಂಡಿದೆ. ಅಮೆರಿಕಾದ ಸ್ಟೇಟ್ ಡಿಪಾರ್ಟ್‍ಮೆಂಟ್ ವೆಬ್‍ಸೈಟ್‍ನಲ್ಲಿ ವೀಸಾಗೆ ಕಾಯುವಿಕೆ ಅವಧಿ ಒಂದೂವರೆ ವರ್ಷ ಎಂದು ಬರೆಯಲಾಗಿದ್ದು, ಇದರಂತೆಯೇ ಆದರೆ ಈಗ ವೀಸಾಗೆ ಅರ್ಜಿ ಸಲ್ಲಿಸಿದವರಿಗೆ ಮಾರ್ಚ್-ಎಪ್ರಿಲ್ 2024 ರಲ್ಲಿ ವೀಸಾ ದೊರೆಯಬಹುದು.

                    ಹೊಸದಿಲ್ಲಿಯಲ್ಲಿರುವ ಅಮೆರಿಕಾ ಕಾನ್ಸುಲೇಟ್‍ನಲ್ಲಿ ವೀಸಾ ಅಪಾಯಿಂಟ್ಮೆಂಟ್‍ಗಾಗಿ ಸರಾಸರಿ ಕಾಯುವಿಕೆ ಸಮಯ 522 ದಿನಗಳಾದರೆ ಸ್ಟೂಡೆಂಟ್ ವೀಸಾಗಳಿಗೆ ಈ ಅವಧಿ 471 ದಿನಗಳಾಗಿವೆ.

                    ಮುಂಬೈಯಲ್ಲಾದರೆ, ಅಮೆರಿಕಾ ವೀಸಾ ಅಪಾಯಿಂಟ್ಮೆಂಟ್‍ಗಾಗಿ(Visa Appointment) ಸರಾಸರಿ ಕಾಯುವಿಕೆ ಸಮಯ 517 ದಿನಗಳು ಹಾಗೂ ಸ್ಟೂಡೆಂಟ್ ವೀಸಾಗಾಗಿ 10 ದಿನಗಳಾಗಿವೆ. ದಿಲ್ಲಿಯಲ್ಲಿ ನಾನ್-ಇಮ್ಮಿಗ್ರೆಂಟ್ ವೀಸಾಗಳಿಗೆ (Immigrant Visa) ಕಾಯುವಿಕೆ ಸಮಯ 198 ದಿನಗಳ ಹಾಗೂ ಮುಂಬೈಯಲ್ಲಿ 72 ದಿನಗಳಾಗಿವೆ.

                    ಚೆನ್ನೈಯಲ್ಲಿ ವಿಸಿಟರ್ ವೀಸಾಗಾಗಿ ಕಾಯುವಿಕೆ ಸಮಯ 557 ದಿನಗಳಾಗಿವೆ ಹಾಗೂ ನಾನ್-ಇಮ್ಮಿಗ್ರೆಂಟ್ ವೀಸಾಗಳಿಗಾಗಿ 185 ದಿನಗಳಾಗಿವೆ. ಹೈದರಾಬಾದ್‍ನಲ್ಲಿ ವಿಸಿಟರ್ ವೀಸಾಗೆ ಕಾಯುವಿಕೆ ಸಮಯ 518 ದಿನಗಳಾಗಿವೆ.

              ದೀರ್ಘ ಕಾಯುವಿಕೆ ಅವಧಿ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕಾದ ರಾಯಭಾರ ಕಚೇರಿ, ಈ ಸಮಯವನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಹಾಗೂ ಈ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗುತ್ತಿದೆ ಹಾಗೂ ಹೊಸದಾಗಿ ತರಬೇತಿ ಪಡೆದ ಉದ್ಯೋಗಿಗಳು ಭಾರತ ಸಹಿತ ವಿವಿಧ ಕಾನ್ಸುಲೇಟ್‍ಗಳಿಗೆ ನೇಮಕಗೊಳ್ಳುತ್ತಿದ್ದಾರೆ ಎಂದು ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries