HEALTH TIPS

ಧರ್ಮತ್ತಡ್ಕ ಶಾಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ


        ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವವನ್ನು  ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
        ಹೈಯರ್ ಸೆಕೆಂಡರಿ ಪ್ರಾಂಶುಪಾಲ ಎನ್. ರಾಮಚಂದ್ರ ಭಟ್ ದ್ವಜಾರೋಹಣಗೈದರು. ಶಾಲಾ ವಿದ್ಯಾರ್ಥಿಗಳು ವಿವಿಧ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಂಚರಿಸಿದರು.
          ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಎನ್. ಸುಬ್ರಾಯ ಭಟ್ ಮಾತನಾಡಿ, ಯುದ್ಧ ವೀರರ ಬಲಿದಾನದ ಫಲಿತಾಂಶವೇ  ಇಂದಿನ ನಮ್ಮ ಸ್ವಾತಂತ್ಯ; ಇದನ್ನು ಅತಂತ್ರವಾಗಲು ಬಿಡಬಾರದು, ಸ್ವಾತಂತ್ರ್ಯ ಸಿಗುವುದರ ಹಿಂದಿನ ನಮ್ಮ  ಹಿರಿಯರ ತ್ಯಾಗವನ್ನು ಇಂದಿನ ಮಕ್ಕಳು ಅರಿತು ಗೌರವಿಸಬೇಕು ಎಂದರು. ಕಾರ್ಯಕ್ರಮಕ್ಕೆ  ಆಗಮಿಸಿದ ನಿವೃತ್ತ ಸೈನಿಕ ಜಿ. ಅಪ್ಪಯ್ಯ ಮಣಿಯಾಣಿ ಮಾತನಾಡಿ, ಭಾರತದ ವೀರ ಯೋಧರ ತ್ಯಾಗ ಬಲಿದಾನಗಳು, ಅವರ ಬದುಕಿನ ಮಾರ್ಗ ನಮಗೆ ಆದರ್ಶವಾಗಬೇಕು, ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಯುವಕರು ಸೇನೆಯನ್ನು ಸೇರಿ ರಾಷ್ಟ್ರ ಸೇವೆಯನ್ನು ಗೈಯುವಲ್ಲಿ ಮನ ಮಾಡಬೇಕು ಎಂದು   ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಗಣ್ಯ ವ್ಯಕ್ತಿ, ಕೃಷಿಕ ಸುಧಾಕರ ಪಾರಿಂಜೆ ಶುಭಾಶಂಸನೆಗೈದರು. ಈರ್ವರನ್ನೂ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
          ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಎನ್. ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರಿನ್ಸಿಪಾಲ ಎನ್. ರಾಮಚಂದ್ರ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವ್ಯವಸ್ಥಾಪಕ ಎನ್. ಶಂಕರ ನಾರಾಯಣ ಭಟ್ ಶುಭಾಶಂಸನೆಗೈದರು. ಅಧ್ಯಾಪಕರಾದ ವಿಚೇತ ಬಿ. ಹಾಗೂ ಉಷಾಪದ್ಮ ಅತಿಥಿಗಳನ್ನು ಪರಿಚಯಿಸಿದರು.
          ಕೋವಿಡ್ ಸಂದಿಗ್ಧತೆಯ ಕಾಲದಲ್ಲಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತನ್ನನ್ನು  ತೊಡಗಿಸಿಕೊಂಡು, ಪ್ರಸ್ತುತವೂ  ಹವ್ಯಾಸವಾಗಿ ಅದನ್ನು ಮುಂದುವರಿಸುತ್ತಿರುವ ಶಾಲಾ ವಿದ್ಯಾರ್ಥಿ ಅದ್ವಿತ್‍ನನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಶ್ವೇತಕುಮಾರಿ ಅವರು ಅದ್ವಿತ್‍ರನ್ನು ಪರಿಚಯಿಸಿದರು.
        ಎಪ್ಪತ್ತೈದರ ಭಾರತದ ಸ್ವಾತಂತ್ಯ ಅಮೃತ ಮಹೋತ್ಸವದ ಪ್ರಯುಕ್ತ ಸಮಾಜ ವಿಜ್ಞಾನ ಕ್ಲಬ್, ಆಟ್ರ್ಸ್ ಕ್ಲಬ್  ವತಿಯಿಂದ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳ ಮೂಲಕ ಬಹುಮಾನವನ್ನು  ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. ನೃತ್ಯ, ಭಾಷಣ, ದೇಶಭಕ್ತಿಗೀತೆ  ನಡೆಯಿತು. ವಿದ್ಯಾರ್ಥಿಗಳಾದ ರಾಮ್ ಸ್ವರೂಪ್ ಆಳ್ವ ಹಾಗೂ ಪ್ರವೀಕ್ಷಾ  ಸಾಂಸ್ಕøತಿಕ ಕಾರ್ಯಕ್ರಮವನ್ನು ನಿರೂಪಿಸಿದರು.
             ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಮುಖ್ಯೋಪಾಧ್ಯಾಯ ಇ. ಎಚ್. ಗೋವಿಂದ ಭಟ್ ಸ್ವಾಗತಿಸಿ, ಸುನೀತಾ ಕೆ. ವಂದಿಸಿದರು. ಶಿವನಾರಾಯಣ ಭಟ್, ಪ್ರಶಾಂತ ಹೊಳ್ಳ ಎನ್. ಹಾಗೂ ಶಶಿಧರ ಕೆ. ಕಾರ್ಯಕ್ರಮ ನಿರೂಪಿಸಿದರು.



Post a Comment

1 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries