ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಗೆ ಸೋಮವಾರ ಒಂದಷ್ಟು ಕಡಿಮೆಯಾಗಿದ್ದರೂ, ಮುಂದಿನ ಮೂರು ದಿವಸಗಳ ಕಾಲ ಮಳೆ ಬಿರುಸಿನಿಂದ ಕೂಡಿರಲಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಈ ನಿಟ್ಟಿನಲ್ಲಿ ಆ. 11ರ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಿರಂತರ ಮಳೆಯಾಘುತ್ತಿರುವ ಹಿನ್ನೆಲೆಯಲ್ಲಿ ರಾಜಾಫುರದ ಪ್ರೀ ಮೆಟ್ರಿಕ್ ಹಾಸ್ಟೆಲ್ ಸನಿಹದ ಕರ್ಗಲ್ಲಿನಿಂದ ನಿರ್ಮಿಸಿದ ಆವರಣಗೋಡೆ ಕುಸಿದು ಬಿದ್ದಿದ್ದು, ಸನಿಹದಲ್ಲಿದ್ದ ವಿದ್ಯಾರ್ಥಿಗಳು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಮುಕಾರಿಕಂಡ ಕೋಡಿಮೂಲೆ ನಿವಾಸಿ ಜಯಪ್ರಕಾಶ್ ಕ್ರಾಸ್ತ ಎಂಬವರ ಹೆಂಚುಹಾಸಿನ ಮನೆ ಕುಸಿದು ಬಿದ್ದು ಹಾನಿಯುಂಟಾಗಿದೆ. ಮನೆಯಲ್ಲಿದ್ದವರಲ್ಲಿ ಒಬ್ಬರು ಗಾಐಗೊಂಡಿದ್ದು, ಇತರ ಇಬ್ಬರು ಓಡಿ ಪಾರಾಗಿದ್ದಾರೆ. ಗಾಯಾಳು ಜೋಯೆಲ್ ಎಂಬವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆ ಮಂಗಲ್ಪಾಡಿ ಪಂಚಾಯಿತಿ ಕೋಡಿಬೈಲು ಕರವೂರು ಎಂಬಲ್ಲಿ ಸರ್ಕಾರಿ ಬಾವಿಯೊಂದು ಭೂಮಿಯೊಳಗೆ ಕುಸಿದಿದೆ. ಸುಮಾರು 55ಅಡಿ ಆಳದ ಈ ಬಾವಿಯನ್ನು ಸ್ಥಳೀಯ ನಿವಾಸಿಗಳು ಬಳಸುತ್ತಿದ್ದು, ಬಾವಿ ಕುಸಿತದಿಂದ ಸಮಸ್ಯೆ ಎದುರಾಗಿದೆ.
ಕಾಸರಗೋಡು: ಇನ್ನೂ ಮೂರು ದಿನ ಬಿರುಸಿನ ಮಳೆ, ವಿವಿಧೆಡೆ ಹಾನಿ
0
ಆಗಸ್ಟ್ 09, 2022

.webp)
