ಕಾಸರಗೋಡು: ಖಾದಿ ಮಂಡಳಿ ಹಾಗೂ ಖಾದಿ ಸಂಸ್ಥೆಗಳು ಆಯೋಜಿಸಿರುವ ಖಾದಿ ಓಣಂ ಮೇಳದ ಜಿಲ್ಲಾಮಟ್ಟದ ಉದ್ಘಾಟನೆ ಆ. 9ರಂದು ಕಾಞಂಗಾಡಿನಲ್ಲಿ ನಡೆಯಲಿದೆ.
ಬೆಳಗ್ಗೆ 10ಕ್ಕೆ ಕಾಞಂಗಾಡ್ ಬಸ್ ನಿಲ್ದಾಣ ವಠಾರದ ಖಾದಿ ಸೌಭಾಗ್ಯ ಪ್ರಾಂಗಣದಲ್ಲಿ ಖಾದಿ ಮಂಡಳಿ ಉಪಾಧ್ಯಕ್ಷ ಪಿ.ಜಯರಾಜನ್ ುದ್ಘಾಟನೆ ನೆರವೇರಿಸುವರು. ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸುವರು. ಮೇಳದ ಅಂಗವಾಗಿ, ಎಲ್ಲಾ ಖಾದಿ ಸಂಸ್ಥೆಗಳಿಂದ ಖಾದಿ ಉತ್ಪನ್ನಗಳ ಮೇಲೆ ಶೇಕಡಾ 30 ರವರೆಗೆ ರಿಯಾಯಿತಿ ದರದ ಮಾರಾಟ ಆಯೋಜಿಸಲಾಗಿದೆ.
ಖಾದಿ ಬಟ್ಟೆಗಳಲ್ಲದೆ, ಗ್ರಾಮೋದ್ಯೋಗ ಉತ್ಪನ್ನಗಳು, ಕರಕುಶಲ ಉತ್ಪನ್ನ ಇತ್ಯಾದಿ ಇಲ್ಲಿ ಲಭ್ಯವಿರಲಿದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ರೂ.1 ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಖಾದಿ ಓಣಂ ಮೇಳ: ಇಂದು ಜಿಲ್ಲಾ ಮಟ್ಟದ ಉದ್ಘಾಟನೆ
0
ಆಗಸ್ಟ್ 09, 2022

