ಮಂಜೇಶ್ವರ: ವಿಶ್ವಹಿಂದೂಪರಿಷತ್ ಮೀಂಜ ಖಂಡ ಸಮಿತಿ ಆಶ್ರಯದಲ್ಲಿ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಾಮಾಯಣ ಮಾಸಾಚರಣೆ ಪ್ರಯುಕ್ತ ದಿನಪೂರ್ತಿ ವಿಶೇಷ ಭಜನಾ ಸತ್ಸಂಗ ಭಾನುವಾರ ಜರಗಿತು.
ಊರ ಪರವೂರ ಭಕ್ತಾದಿಗಳು ಮಾತೆಯರು, ಮಕ್ಕಳೊಂದಿಗೆ ಸೇರಿ ನಡೆಸಿದ ಈ ಭಜನಾ ಕಾರ್ಯಕ್ರಮದ ಜೊತೆಯಲ್ಲಿ ಮಕ್ಕಳಿಗೆ ರಾಮಾಯಣಕ್ಕೆ ಸಂಬಂಧಿಸಿದ ರಸಪ್ರಶ್ನೆ, ಶ್ರೀರಾಮನ ಚಿತ್ರರಚನೆ ಸ್ಪರ್ಧೆಗಳು, ಹನುಮಾನ್ ಚಾಲೀಸ ಪಠಣ, ವಿಷ್ಣು ಸಹಸ್ರನಾಮ ಪಾರಾಯಣ, ಕುಣಿತ ಭಜನೆ ಇತ್ಯಾದಿ ಚಟುವಟಿಕೆಗಳು ಜರಗಿದುವು. ಸಂಜೆ ಡಾ. ಸೋಂದಾ ಭಾಸ್ಕರ ಭಟ್ ಅವರು ಸತ್ಸಂಗ ನೆರವೇರಿಸಿದರು. ವಿ.ಹೆಚ್.ಪಿ. ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವಿ.ಹೆಚ್.ಪಿ. ಜಿಲ್ಲಾ ಉಪಾಧ್ಯಕ್ಷೆ ಮೀರಾ ಆಳ್ವ, ಸತ್ಸಂಗ್ ಪ್ರಮುಖ್ ಹರಿದಾಸ್ ಜಯಾನಂದ ಕುಮರ್ ಹೊಸದುರ್ಗ ಉಪಸ್ಥಿತರಿದ್ದರು.

.jpg)
.jpg)
