HEALTH TIPS

ಪೆರ್ಲದಲ್ಲಿ ಸಹಕಾರ ಭಾರತಿಯಿಂದ ಚಿಂತನಾ ಬೈಠಕ್: ನಾನು ಎಂಬುದರ ಬದಲು ನಾವು ಎಂಬುದೇ ಸಹಕಾರಿ ಸಮಾಜಕ್ಕೆ ಪೂರಕ: ಕಜಂಪಾಡಿ ಸುಬ್ರಹ್ಮಣ್ಯ ಭಟ್


              ಪೆರ್ಲ: ಸಹಕಾರಿ ಭಾರತಿ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ಏಕ ದಿನ ಚಿಂತನಾ ಬೈಠಕ್ ಪೆರ್ಲದ ನಾಲಂದಾ ಮಹಾವಿದ್ಯಾಲಯದಲ್ಲಿ ಸೋಮವಾರ ಜರಗಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಖಿಲ ಭಾರತೀಯ ಕಾರ್ಯಕಾರಿಣಿ ಆಹ್ವಾನಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಹಕಾರ ಎಂಬುದು ಭಾರತೀಯ ಸುಸ್ಥಿತಿಯಲ್ಲಿ ಅಂತರ್ಲೀನವಾಗಿರುವ ಗುಣವಾಗಿದ್ದು ನಾನು ಎಂಬುದರ ಬದಲಾಗಿ ನಾವು ಎಂದು ಚಿಂತಿಸಿದಾಗ ಸಹಕಾರಿ ರಂಗವು ಸಮಾಜದ ಪ್ರಗತಿಗೆ ಪೂರಕವಾಗುತ್ತದೆ. ಭಿನ್ನತೆ ಹುಟ್ಟುವುದು ಸಹಜ ಆದರೆ ಭಿನ್ನಾಭಿಪ್ರಾಯವು ಅಂತಿಮ ತೀರ್ಮಾನದ ನಂತರ ಮುಂದುವರಿಯಬಾರದು. ಚರ್ಚೆಯ ನಂತರದ ತೀರ್ಮಾನವು ಅವಿರೋಧದಿಂದ ಎಲ್ಲರಿಗೂ ಸೀಕೃತವಾಗಬೇಕೆಂದು ಅವರು ಅಭಿಪ್ರಾಯಪಟ್ಟರು.



          ಸಹಕಾರಿ ಭಾರತಿ ಜಿಲ್ಲಾಧ್ಯಕ್ಷ ಗಣೇಶ ಪಾರೆಕಟ್ಟ ಸಭೆಯ ಅಧ್ಯಕ್ಷತೆವಹಿಸಿದ್ದರು. ಪ್ರಾಂತ್ಯ ಅಧ್ಯಕ್ಷ ಸುಧಾಕರನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಆರ್.ಕಣ್ಣನ್, ಅಖಿಲಭಾರತ ಸಹ ಸಂಪರ್ಕ ಪ್ರಮುಖ್ ಕೈಲಾಸ ಮೂರ್ತಿ,ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯ ನ್ಯಾಯವಾದಿ.ಕರುಣಾಕರನ್ ನಂಬ್ಯಾರ್, ಪ್ರಾಂತ್ಯ ಸಮಿತಿ ಸದಸ್ಯ ಐತ್ತಪ್ಪ ಮವ್ವಾರು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲೆಯ ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು,ಉಪಾಧ್ಯಕ್ಷರು, ಕ್ಯಾಂಪೆÇ್ಕ ನಿರ್ದೇಶಕರು, ಸರ್ಕಲ್ ಕೋ ಓಪರೇಟಿವ್ ಸದಸ್ಯರು ಹಾಗೂ ಹಿರಿಯ ಸಹಕಾರಿಗಳು ಬೈಠಕ್ ನಲ್ಲಿ ಪಾಲ್ಗೊಂಡರು. ಜಿಲ್ಲಾ ಕಾರ್ಯದರ್ಶಿ ವಿಘ್ನೇಶ್ವರ ಕೆದುಕೋಡಿ ಸ್ವಾಗತಿಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಕಿದೂರು ವಂದಿಸಿದರು.ಸಹಕಾರ ಭಾರತಿ ಮಂಜೇಶ್ವರ ತಾಲೂಕು ಅಧ್ಯಕ್ಷ ಆಶೋಕ್ ಬಾಡೂರು ನಿರೂಪಿಸಿದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries