HEALTH TIPS

ಹೈಯರ್ ಸೆಕೆಂಡರಿ ಸಮತ್ವ ಪರೀಕ್ಷೆ : ಕನ್ನಡಮಾಧ್ಯಮ ಪರೀಕ್ಷೆ ರದ್ದತಿಗೆ ಷಡ್ಯಂತ್ರ ಮುಖ್ಯಮಂತ್ರಿಗೆ ದೂರು


              ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಭಾμÁ ಅಲ್ಪಸಂಖ್ಯಾತ ಕನ್ನಡಿಗರಿಗೆ ನಿರಂತರ ಅನ್ಯಾಯ ನಡೆಯುತ್ತಿದ್ದು, ಇದೀಗ ಕನ್ನಡ ಮಾಧ್ಯಮ ಹೈಯರ್ ಸೆಕೆಂಡರಿ ಸಮತ್ವ ಪರೀಕ್ಷೆಯನ್ನು ಮಲೆಯಾಳಂ ಅಥವಾ ಆಂಗ್ಲಮಾಧ್ಯಮದಲ್ಲಿ ಬರೆಯಬೇಕೆಂದು ತಿರುವನಂತಪುರದ ಪರೀಕ್ಷಾಭವನ ಅಧಿಕಾರಿಗಳ ಮೌಖಿಕ ಆದೇಶ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕೂಡಲೇ ಸÀರ್ಕಾರ, ಶಿಕ್ಷಣ ಇಲಾಖೆ ಕ್ರಮಕೈಗೊಳ್ಳುವಂತೆ ಕಾಸರಗೋಡು ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹμರ್Áದ್ ವರ್ಕಾಡಿ ಮುಖ್ಯಮಂತ್ರಿಗೆ ಮನವಿ ಮಾಡಿದ್ಜಾರೆ.
               ಕಾಸರಗೋಡು ಜಿಲ್ಲೆಯಲ್ಲಿ  ಕನ್ನಡ ಮಾಧ್ಯಮದಲ್ಲಿ ಸಮತ್ವ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸ್ಥಳಿಯಾಡಳಿತ ಸಂಸ್ಥೆಗಳ ನೆರವಿನಿಂದ  ಕನ್ನಡ ಪುಸ್ತಕಗಳನ್ನು ಮುದ್ರಿಸಿ ವಿತರಿಸಲಾಗುತ್ತಿದ್ದು, ಕನ್ನಡ ಮಾಧ್ಯಮದಲ್ಲಿಯೇ ತರಗತಿಯನ್ನೂ ನೀಡಲಾಗುತ್ತಿದೆ. ಅಗಸ್ಟ್ 13ರಿಂದ ಸಮತ್ವ ಪರೀಕ್ಷೆನಡೆಯಲಿದ್ದು, ಇದೀಗ ಪರೀಕ್ಷಾ ಭವನ ಅಧಿಕಾರಿಗಳು ಸಭೆ ನಡೆಸಿ, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲವೆಂಬ ಮೌಖಿಕ ಆದೇಶ ವ್ಯಾಪಕ ಪ್ರತಿಭಟನೆಗ್ರಾಸವಾಗಿದೆ. ಈ ಬಗ್ಗೆ ಕಾಸರಗೋಡು ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹμರ್Áದ್ ವರ್ಕಾಡಿಯವರು ಕೇರಳ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು,  ಭಾμÁ ಅಲ್ಪಸಂಖ್ಯಾತ ಕನ್ನಡಿಗರಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಶಿಕ್ಷಣ ಇಲಾಖೆ ಇತ್ತೀಚೆಗೆ  ಹೊರಡಿಸಿದ ಆದೇಶದಲ್ಲಿ ಸಮತ್ವ ಪರೀಕ್ಷೆಯನ್ನು ಮಲೆಯಾಳಂ ಮತ್ತು ಆಂಗ್ಲ ಭಾμÉಯಲ್ಲಿ ಮಾತ್ರವೇ ಪರೀಕ್ಷೆಗೆ ಅವಕಾಶ ಎಂಬ ಉಲ್ಲೇಖವಿದ್ದು, ಈ ಆದೇಶದಿಂದ ಭಾμÁ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡನ್ನು ಹೊರತುಪಡಿಸುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರ್ಷ 156 ಕನ್ನಡ ವಿದ್ಯಾರ್ಥಿಗಳು ಹೈಯ್ಯರ್ ಸೆಕೆಂಡರಿಗೆ ಹೆಸರು ನೋಂದಾಯಿಸಿದ್ದು, ಇವರಿಗೆ ಕನ್ನಡ ಭಾμÉಯಲ್ಲಿಯೇ ತರಗತಿ ನಡೆಸಲಾಗಿತ್ತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries