HEALTH TIPS

ಸಿರಿಬಾಗಿಲು ಸಾಂಸ್ಕøತಿಕ ಭವನದಲ್ಲಿ ಯಕ್ಷಬಳಗ ಹೊಸಂಗಡಿ ತಂಡದ ಇಂದ್ರಜಿತುಕಾಳಗ ತಾಳಮದ್ದಳೆ


                ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿμÁ್ಠನದ ಸಾಂಸ್ಕೃತಿಕ ಭವನದಲ್ಲಿ ಕಲಾ ಸಾಹಿತ್ಯ ವೈಭವದ ಮೂರನೇ ಕಾರ್ಯಕ್ರಮದ ಅಂಗವಾಗಿ ಯಕ್ಷಬಳಗ ಹೊಸಂಗಡಿ ತಂಡದಿಂದ ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಳೆ ಜರಗಿತು.
          ಕಾರ್ಯಕ್ರಮವನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ದೀಪಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಾ ಸಾಹಿತ್ಯ ಸಾಂಸ್ಕೃತಿಕ ಲೋಕಕ್ಕೆ ಸಿರಿಬಾಗಿಲು ಮನೆಯವರ ಕೊಡುಗೆ ಅಪಾರ. ಸಿರಿಬಾಗಿಲು ವೆಂಕಪ್ಪಯ್ಯ ನವರು ಸಂಶೋಧನೆ ಹಾಗು ಸಾಹಿತ್ಯ ರಚನೆಯಲ್ಲಿ ಸೇವೆಗೈದವರು. ಅವರ ಹೆಸರಲ್ಲಿ ಸಾಂಸಕೃತಿಕ ಭವನ ತಲೆಎತ್ತಿರುವುದು ನಾಡಿಗೆ ಹೆಮ್ಮೆಯ ವಿಚಾರ. ಭವನದಲ್ಲಿ ಇನಷ್ಟು ಚಟುವಟಿಕೆಗಳು ಜರಗಿ ಮಾದರಿ ಸಂಸ್ಥೆಯಾಗಿ ಬೆಳಗಲಿ ಎಂದು ಶುಭ ಹಾರೈಸಿದರು.
          ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ಯಕ್ಷಬಳಗ ಹೊಸಂಗಡಿಯ ಅಧ್ಯಕ್ಷ ಸತೀಶ ಅಡಪ ಸಂಕಬೈಲು ಉಪಸ್ಥಿತರಿದ್ದರು. ರಾಜಾರಾಮ ರಾವ್ ಮೀಯಪದವು ಸಭೆ ನಿರ್ವಹಿಸಿದರು. ಪ್ರತಿμÁ್ಠನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣಮಯ್ಯ ವಂದಿಸಿದರು.



         ಬಳಿಕ ನಡೆದ ಇಂದ್ರಜಿತು ಕಾಳಗ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರು ರತ್ನಾಕರ ಆಳ್ವ ತಲಪಾಡಿ, ಚೆಂಡೆ ಮದ್ದಳೆಯಲ್ಲಿ ರಾಜಾರಾಮ ಬಲ್ಲಾಳ ಚಿಪ್ಪಾರು, ಶುಭಚರಣ ತಾಳ್ತಜೆ, ಶೃತಕಿರಣ ತಾಳ್ತಜೆ ಭಾಗವಹಿಸಿದ್ದರು.
         ಅರ್ಥಧಾರಿಗಳಾಗಿ ವಿಠಲ ಭಟ್ ಮೊಗಸಾಲೆ, ನಾಗರಾಜ ಪದಕಣ್ಣಾಯ ಮೂಡಂಬೈಲು. ಶಂಕರ ಆಚಾರ್ಯ ಕೋಳ್ಯೂರು, ಸತೀಶ ಅಡಪ ಸಂಕಬೈಲು, ರಾಜಾರಾಮ ರಾವ್ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ ಭಾಗವಹಿಸಿದ್ದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries