ಕಾಸರಗೋಡು: 'ನಮಗೆ ಯುದ್ಧ ಬೇಡ, ಶಾಂತಿ ಬೇಕಾಗಿದೆ'ವಿಶ್ವಶಾಂತಿಗಾಗಿ ಯುದ್ಧ ಬೇಡ ಎಂಬ ಘೋಷಣೆಯೊಂದಿಗೆ ಚೆಮ್ನಾಡು ಪಶ್ಚಿಮ ಸರ್ಕಾರಿ ಯುಪಿ ಶಾಲೆಯ ವಿದ್ಯಾರ್ಥಿಗಳಿಂದ ಸೋಮವಾರ ಯುದ್ಧವಿರೋಧಿ ರ್ಯಾಲಿ ನಡೆಯಿತು.
ಮನುಕುಲದ ವಿನಾಶಕ್ಕೆ ಕಾರಣವಾಗುವ ಯುದ್ಧ ನಮಗೆ ಬೇಡ ಎಂಬ ಘೋಷಣಾ ಫಲಕಗಳು ಹಾಗೂ ಹಣೆಪಟ್ಟಿ ಬಿಗಿದು ವಿದ್ಯಾರ್ಥಿಗಳು ಚೆಮ್ನಾಡಿನ ಮಕುಳಂ ಜಂಕ್ಷನ್‍ನಲ್ಲಿ ಶಾಂತಿ ಸಂದೇಶದ ಬಿಳಿ ಬಲೂನ್‍ಗಳನ್ನು ಆಕಾಶಕ್ಕೆ ಹಾರಿ ಬಿಟ್ಟರು. ನಗರದಲ್ಲಿ ಮೆರವಣಿಗೆ ನಡೆಸುವ ಮೂಲಕ ಜನಜಾಗೃತಿ ಮೂಡಿಸಿದರು. ಚೆಮ್ನಾಡ್ ಗ್ರಾಪಂ ಸದಸ್ಯ ಅಮೀರ ಬಿ. ಪಾಲೋತ್, ಶಾಲಾ ಪಿಟಿಎ ಅಧ್ಯಕ್ಷ ಪಿ.ತಾರಿಕ್, ಎಸ್‍ಎಂಸಿ ಅಧ್ಯಕ್ಷ ನಾಸರ್ ಕುರಿಕಲ್, ಮುಖ್ಯಶಿಕ್ಷಕಿ ರಮಾ ಎ. ಕೆ, ಶಿಕ್ಷಕರಾದ ಪಿ.ಟಿ.ಬೆನ್ನಿ, ಶಿಜಿತಾ ಕೆ.ವಿ., ಪ್ರಸಿಆನಾ ಸಿ, ಅಜಿಲ್‍ಕುಮಾರ್ ಎಂ ಹಾಗೂ ಪ್ರಸೀನಾಪ್ರಭಾಕರನ್ ಮೆರವಣಿಗೆಗೆ ನೇತೃತ್ವ ನೀಡಿದರು.
ಮನುಕುಲದ ವಿನಾಶಕ್ಕೆ ಕಾರಣವಾಗುವ ಯುದ್ಧ ಬೇಡ: ವಿದ್ಯಾರ್ಥಿಗಳಿಂದ ರ್ಯಾಲಿ
0
ಆಗಸ್ಟ್ 09, 2022
Tags

