ಪೆರ್ಲ: ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ 5 ರಿಂದ 8 ನೇ ತರಗತಿ ವರೆಗಿನ ಮಕ್ಕಳಿಗಾಗಿ, ಪಿ.ಎಂ ಪೋಷಣ್ ಅಭಿಯಾನ್ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯ ಬಿ. ರಾಜೇಂದ್ರ ಅವರು ಉದ್ಘಾಟಿಸಿದರು. ಅಧ್ಯಾಪಕ ಶ್ರೀಕೃಷ್ಣ ಪ್ರಕಾಶ್ ಅವರು ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರಗಳ ಸೇವನೆಯ ಕುರಿತು ಮಾಹಿತಿ ನೀಡಿದರು. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರಗಳ ಪರಿಚಯ ಮತ್ತು ಅವುಗಳ ಪ್ರದರ್ಶನ ಮಾಡಲಾಯಿತು. ಹಿರಿಯ ಅಧ್ಯಾಪಕ ರಾಧಾಕೃಷ್ಣ ಭಟ್ ವಂದಿಸಿದರು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೆರ್ಲದಲ್ಲಿ ಪೋಷಣ್ ಕಾರ್ಯಕ್ರಮ
0
ಸೆಪ್ಟೆಂಬರ್ 28, 2022
Tags




.jpg)
