ಕುಂಬಳೆ: ವಿವಾನ್ ಪ್ರೊಡಕ್ಷನ್‍ನ ವತಿಯಿಂದ ನಿರ್ಮಿಸಿದ "ಐಸಬಾಸ್" ಎಂಬ ತುಳು ವಿಭಿನ್ನ ಅಲ್ಬಂನ್ನು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ,ನಟ ವಿ.ಮನೋಹರ್ ಬಿಡುಗಡೆಗೊಳಿಸಿದರು.
ವಿದ್ಯಾ ವೇಣುಗೋಪಾಲ ಆಚಾರ್ಯ ನಿರ್ಮಾಪಕರಾಗಿರುವ ಈ ಅಲ್ಬಮ್ ನ ಸಾಹಿತ್ಯ,ಕಥೆ,ಚಿತ್ರಕಥೆ,ಸಂಭಾಷಣೆ ಹಾಗೂ ನಿರ್ದೇಶನವನ್ನು ಚೇತನ್ ಕೆ. ವಿಟ್ಲ ನಡೆಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಖ್ಯಾತ ಚಿತ್ರ ಕಲಾವಿದ ದಿ.ಎಂಜಿಕೆ ಆಚಾರ್ಯ ಅವರ ಕನಸಿನ ಕೂಸಾದ ಟೀಮ್ ಎಂಜಿಕೆ ಶಿಲ್ಪಕಲಾ ಕುಂಬಳೆ ಇವರ ಕಲಾತ್ಮಕ ನಿರ್ವಹಣೆ ಹಾಗೂ ಅಭಿನಯದಲ್ಲಿ ಮೂಡಿ ಬಂದಿದ್ದು ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳುತ್ತಿರುವ ಐಸಬಾಸ್ ಕಿರು ಚಿತ್ರರಂಗದಲ್ಲಿ ಹೊಸ ಹವಾ ಸೃಷ್ಠಿಸಿದೆ.




.jpg)
.jpg)
