ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ(ರಿ)ಕಾಸರಗೋಡು ಯುಎಇ ಘಟಕ ದುಬೈ ವತಿಯಿಂದ ನ. 20ರಂದು ದುಬೈ ಕ್ರೆಸೆಂಟ್ ಶಾಲಾ ಮೈದಾನದಲ್ಲಿ ಜರುಗಲಿರುವ 'ದುಬೈ ಗಡಿನಾಡ ಉತ್ಸವ-2022'ಕಾರ್ಯಕ್ರಮದ ಪ್ರಚಾರ ಪತ್ರಿಕೆಯ ಬಿಡುಗಡೆ ಸಮಾರಂಭ ಕಾಸರಗೋಡು ಸರ್ಕಾರಿ ಅತಿಥಿಗೃಹದಲ್ಲಿ ಜರುಗಿತು.
ರಾಜ್ಯ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ಪತ್ರಿಕೆ ಬಿಡುಗಡೆಗೊಳಿಸಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಎ.ಕೆ.ಎಂ ಅಶ್ರಫ್, ಮಾಜಿ ಶಾಸಕ ಕೆ.ಪಿ ಕುಞÂಕಣ್ಣನ್, ಎಂ.ಸಿ ಕಮರುದ್ದೀನ್, ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್, ಉತ್ಸವ ಸಮಿತಿ ಪದಾಧಿಕಾರಿಗಳಾದ ಜೆಡ್.ಎ ಕಯ್ಯಾರ್, ಎ.ಆರ್. ಸಉಬ್ಬಯ್ಯಕಟ್ಟೆ, ಪ್ರೊ. ಎ.ಶ್ರೀನಾಥ್, ಸುಬೈರ್ ಕುಬಣೂರು, ರವಿನಾಯ್ಕಾಪು ಮುಂತಾದವರು ಉಪಸ್ಥಿತರಿದ್ದರು.
'ದುಬೈ ಗಡಿನಾಡ ಉತ್ಸವ-2022': ಪ್ರಚಾರ ಪತ್ರಿಕೆ ಬಿಡುಗಡೆ
0
ಅಕ್ಟೋಬರ್ 26, 2022
Tags





