ಬದಿಯಡ್ಕ: ಉದ್ಯೋಗ ಖಾತರಿ ಕಾರ್ಮಿಕರ ವೇತನ 700 ರೂಪಾಯಿಗಳಾಗಿ ಹೆಚ್ಚಿಸಬೇಕೆಂದು ಕುಂಬ್ಡಾಜೆ ಎನ್ ಆರ್ ಜಿ ಯೂನಿಯನ್ ಆಗ್ರಹಿಸಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪ್ರಸ್ತುತ ನೀಡಲಾಗಿದೆ. ಸರ್ಕಾರ ಅಂಗೀಕರಿಸಿದ ಕನಿಷ್ಠ ಕೂಲಿಯೂ ನೀಡುವುದಿಲ್ಲ.
ಕುಟುಂಬಕ್ಕೆ ವರ್ಷಕ್ಕೆ ನೂರು ಉದ್ಯೋಗದ ದಿನವನ್ನು ಕಾನೂನಿನಲ್ಲಿ ನೀಡಲಾಗಿದ್ದರೂ ಅದು ಸಿಗುವುದಿಲ್ಲ ಎಂದು ಮಾತ್ರವಲ್ಲದೆ ಉದ್ಯೋಗದ ದಿನಗಳನ್ನು ಕಡಿತಗೊಳಿಸುವ ಆದೇಶಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕೆಲಸಕ್ಕಾಗಿ ಪಡೆದಿದ್ದ ಬಾಡಿಗೆ ಕೇಂದ್ರವನ್ನು ನಿಲ್ಲಿಸಲಾಗಿದೆ. ಇತರ ಸೌಲಭ್ಯಗಳು ಈ ಉದ್ಯೋಗಿಗಳಿಗೆ ನೀಡುವುದಿಲ್ಲ.ಇದರಿಂದ ತನ್ನ ಉದ್ಯೋಗಖಾತ್ರಿ ಯೋಜನೆಯಲ್ಲಿ ದುಡಿದು ಸಿಗುವ ಆದಾಯದಿಂದ ಮಾತ್ರ ಬದುಕುತ್ತಿರುವ ಹಲವಾರು ಕಾರ್ಮಿಕರು ಅತಂತ್ರರಾಗುತ್ತಿದ್ದಾರೆ ಇದರಿಂದಾಗಿ ಪ್ರಸ್ತುತ ಸಂದರ್ಭದಲ್ಲಿ ಉದ್ಯೋಗಖಾತ್ರಿ ಕಾರ್ಮಿಕರ ವೇತನವನ್ನು 700 ರೂಪಾಯಿಗಳನ್ನು ಹೆಚ್ಚಿಸಬೇಕು, ಉದ್ಯೋಗ ದಿನಗಳನ್ನು ಕಡಿತಗೊಳಿಸುವ ಕೇಂದ್ರಸರ್ಕಾರ ಆದೇಶವನ್ನು ಹಿಂಪಡೆಯಬೇಕೆಂದು ಎನ್ ಆರ್ ಇ ಜಿ ಯೂನಿಯನ್ ಎ ಐ ಟಿ ಯು ಸಿ ಕುಂಬ್ಡಾಜೆ ಪಂಚಾಯತ್ ಸಮ್ಮೇಳನವು ಆಗ್ರಹಿಸಿದೆ. ಎನ್ ಆರ್ ಇ ಜಿ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ವಿ ರಾಜನ್ ಸಮ್ಮೇಳನವನ್ನು ಉದ್ಘಾಟಿಸಿದರು. ಶಂಕರ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು.
ಎಐಟಿಯುಸಿ ಬದಿಯಡ್ಕ ಮಂಡಲದ ಕಾರ್ಯದರ್ಶಿ ಕೆ ಚಂದ್ರಶೇಖರ ಶೆಟ್ಟಿ, ಕುಂಬ್ಡಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ರಾಜ್ಯ ಸಮಿತಿ ಅಧ್ಯಕ್ಷ ಅಬ್ದುಲ್ ರಸಾಖ್ ಟಿ ಎಂ , ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ನರಸಿಂಹ ಪೂಜಾರಿ, ಮುಖಂಡರಾದ ಪಿ ಎನ್ ಆರ್ ಅಮ್ಮಣ್ಣಾಯ , ಪ್ರಕಾಶನ್ ,ಗಣೇಶನ್, ಬಿಜಿ, ಮಹಮ್ಮದ್ಶಿಹಾಬ್, ಅಚ್ಯುತನ್, ಮಹಮ್ಮದ್, ಬಾಲ ಶೆಟ್ಟಿ, ಮುಂತಾದವರು ಮಾತನಾಡಿದರು. ಮೀನಾಕ್ಷಿ ಸ್ವಾಗತಿಸಿ, ಗೀತಾ ವಂದಿಸಿದರು.
ಉದ್ಯೋಗ ಖಾತರಿ ಕಾರ್ಮಿಕರ ವೇತನ 700ರೂ.ಗೆ ಏರಿಸಲು ಕುಂಬ್ಡಾಜೆ ಎನ್ ಆರ್ ಜಿ ಯೂನಿಯನ್ ಒತ್ತಾಯ
0
ಅಕ್ಟೋಬರ್ 26, 2022
Tags




.jpg)
