ಪೆರ್ಲ: ಪರಿಶಿಷ್ಟ ಜಾತಿ ಕ್ಷೇಮ ಸಮಿತಿ ಎಣ್ಮಕಜೆ ಗ್ರಾಮ ಪಂಚಾಯತಿ ಸಮಿತಿ ವತಿಯಿಂದ ಏಕ ದಿನ ಕ್ರೀಡಾ ಸಮ್ಮೇಳನ ಶೆಟ್ಟಿಬೈಲಿನ ಎಸ್.ಸಿ.ಕಾಲನಿ ಪರಿಸರದಲ್ಲಿ ಜರಗಿತು.
ಪರಿಶಿಷ್ಟ ಜಾತಿ ಸಮುದಾಯದವರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಹಿರಿಯರಾದ ಸುಂದರ ಸರವು ದೀಪ ಬೆಳಗಿಸಿ ಉದ್ಘಾಟಿಸಿದರು. ಪಿಕೆಎಸ್ ಎಣ್ಮಕಜೆ ಪಂಚಾಯತಿ ಸಮಿತಿ ಅಧ್ಯಕ್ಷ ಆನಂದ ಕುಕ್ಕಿಲ ಅಧ್ಯಕ್ಷತೆವಹಿಸಿದ್ದರು. ಪಿಕೆಎಸ್ ಕುಂಬಳೆ ಏರಿಯಾ ಕಾರ್ಯದರ್ಶಿ ಸದಾನಂದ ಶೇಣಿ, ಸಿಪಿಐಎಂನ ಕಾಟುಕುಕ್ಕೆ ಲೋಕಲ್ ಸಮಿತಿ ಸದಸ್ಯ ರಾಜಶೇಖರ ಎನ್, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ ಸ್ವರ್ಗ, ಸಿಡಿಎಸ್ ಸದಸ್ಯೆ ಉದಯ ಕುಮಾರಿ, ಹರೀಶ ಸರವು, ವಿಠಲ ಸರವು, ಹರ್ಷ ಕಿರಣ್,ಹರೀಶ ಶಿವಗಿರಿ,ಕೊರಗ ಶೆಟ್ಟಿ ಬೈಲು,ಚನಿಯ ಶೆಟ್ಟಿಬೈಲ್ ಮೊದಲಾದವರು ಪಾಲ್ಗೊಂಡಿದ್ದರು. ಪಿಕೆಎಸ್ ಪಂ.ಕಾರ್ಯದರ್ಶಿ ಶಶಿಧರ ಕಾಟುಕುಕ್ಕೆ ಸ್ವಾಗತಿಸಿ, ಘಟಕದ ಕಾರ್ಯದರ್ಶಿ ಭಾಗ್ಯ ಜ್ಯೋತಿ ವಂದಿಸಿದರು.
ಪಿಕೆಎಸ್ ಎಣ್ಮಕಜೆ ಪಂ.ಸಮಿತಿಯಿಂದ ಶೆಟ್ಟಿಬೈಲ್ ನಲ್ಲಿ ಕ್ರೀಡಾ ಸಮ್ಮೇಳನ
0
ಅಕ್ಟೋಬರ್ 26, 2022




.jpg)
