ಪಾಲಕ್ಕಾಡ್: ಆರ್.ಎಸ್.ಎಸ್. ಶಾರೀರಿಕ್ ಪ್ರಮುಖ್ ಶ್ರೀನಿವಾಸನ್ ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿದೆ.
ಎಸ್.ಡಿ.ಪಿ.ಐ. ರಾಜ್ಯ ಸಮಿತಿ ಸದಸ್ಯ ಅಮೀರ್ ಅಲಿ ಬಂಧಿತ ಆರೋಪಿ.
ಪಿತೂರಿ, ಆರೋಪಿಗಳಿಗೆ ನೆರವು ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಪೋಲೀಸರು ಅಮೀರ್ ಅಲಿಯನ್ನು ಬಂಧಿಸಿರುವರು. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಪ್ರಕರಣದ 37ನೇ ಆರೋಪಿ ಬಶೀರ್ ನನ್ನು ಇತ್ತೀಚೆಗೆ ಪೋಲೀಸರು ಬಂಧಿಸಿದ್ದರು. ಪಾಲಕ್ಕಾಡ್‍ನ ವೆನ್ನಕ್ಕರ ಮೂಲದ ಈತ ತಲೆಮರೆಸಿಕೊಂಡಿದ್ದು, ನಿನ್ನೆ ಸಿಕ್ಕಿಬಿದ್ದಿದ್ದಾನೆ.
ಏಪ್ರಿಲ್ 16 ರಂದು ಎಸ್‍ಡಿಪಿಐ ಕಾರ್ಯಕರ್ತರು ಶ್ರೀನಿವಾಸನ್ ಅವರನ್ನು ಕಡಿದು ಹತ್ಯೆ ಮಾಡಿದ್ದರು. ಎರಡು ಬೈಕ್‍ಗಳಲ್ಲಿ ಆರು ಮಂದಿ ಆಗಮಿಸಿದ್ದು, ಮೂವರು ಅಂಗಡಿಗೆ ನುಗ್ಗಿ ಶ್ರೀನಿವಾಸನ್‍ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಶ್ರೀನಿವಾಸನ್ ಅವರ ತಲೆಯ ಮೇಲೆಯೇ ಮೂರು ಗಾಯಗಳಾಗಿವೆ. ದೇಹದ ಮೇಲೆ ಸುಮಾರು 10 ಆಳವಾದ ಗಾಯಗಳು ಪತ್ತೆಯಾಗಿವೆ.
ಆರ್.ಎಸ್.ಎಸ್ ಕಾರ್ಯಕರ್ತ ಶ್ರೀನಿವಾಸನ್ ಹತ್ಯೆ ಘಟನೆ: ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀರ್ ಅಲಿ ಬಂಧನ
0
ಅಕ್ಟೋಬರ್ 26, 2022


