ಕಾಸರಗೋಡು: ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಕೇರಳ ರಾಜ್ಯ ಯುವಜನ ಕಲ್ಯಾಣ ಮಂಡಳಿ, ಜಿಲ್ಲಾ ಯುವ ಕೇಂದ್ರ ವತಿಯಿಂದ ಆಯೋಜಿಸಲಾದ ಸಾಮೂಹಿಕ ಓಟವನ್ನು ಶಾಸಕ ಸಿ.ಎಚ್.ಕುಂಜಂಬು ಉದ್ಘಾಟಿಸಿದರು.
ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಪೆರಿಯಾ ಸೆಂಟ್ರಲ್ ಯೂನಿವರ್ಸಿಟಿ ಗೇಟ್‍ನಿಂದ ಪೆರಿಯಾ ಪೇಟೆವರೆಗೆ ನಡೆದ ರ್ಯಾಲಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ವಕೀಲ ಸಿ.ಶುಕೂರ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಸದಸ್ಯ ಅನಿಲ್ ಬಂಗಳಂ, ಪೆರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಪಿ.ಬಾಲಚಂದ್ರನ್, ಎಸ್‍ಪಿಸಿ ಕಾರ್ಯಕ್ರಮಾಧಿಕಾರಿ ಕೆ.ವಿ.ವಿನು, ಸಮಾವಾದಿ ಕ್ಲಬ್ ಜಿಲ್ಲಾ ಸಂಯೋಜಕಿ ಕೆ.ವಿ.ಚೈತ್ರಾ, ಯುವ ಕಲ್ಯಾಣ ಮಂಡಳಿ ಜಿಲ್ಲಾ ಸಂಯೋಜಕ ಎ.ವಿ.ಶಿವಪ್ರಸಾದ್, ಜಿಲ್ಲಾ ಕಾರ್ಯಕ್ರಮಾಧಿಕಾರಿ ಪಿ.ಸಿ.ಶಿಲಾಸ್, ತಂಡದ ಕೇರಳ ಸದಸ್ಯರು, ಎನ್ ಎಸ್ ಎಸ್ ಸ್ವಯಂಸೇವಕರು, ಅವಳಿಡಂ ಕ್ಲಬ್ ಪದಾಧಿಕಾರಿಗಳು, ವಿದ್ಯಾರ್ಥಿ ಪೆÇಲೀಸ್ ಕೆಡೆಟ್ ಗಳು ಮೊದಲಾದವರು ಭಾಗವಹಿಸಿದ್ದರು. ಯುವಜನ ಕಲ್ಯಾಣ ಮಂಡಳಿಯು ಮಾದಕ ವಸ್ತು ವಿರೋಧಿ ಅಭಿಯಾನದ ಅಂಗವಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ತಿಂಗಳ ಕಾಲ ಅಭಿಯಾನ ನಡೆಸುತ್ತಿದೆ.
ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಸಾಮೂಹಿಕ ಓಟ
0
ಅಕ್ಟೋಬರ್ 26, 2022
Tags


