HEALTH TIPS

ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳ ಮೊದಲ ಆಯ್ಕೆ ಅಮೆರಿಕ

 

              ನವದೆಹಲಿ: ನವೆಂಬರ್ 14, 2022: ಸತತವಾಗಿ ಎರಡನೆಯ ವರ್ಷ ದಾಖಲೆ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅಮೆರಿಕಕ್ಕೆ ಬಂದಿದ್ದಾರೆ. ಇಂದು ಬಿಡುಗಡೆಯಾದ ಓಪನ್ ಡೋರ್ಸ್ ರಿಪೋರ್ಟ್ ಪ್ರಕಾರ 2021-22ರ ಶೈಕ್ಷಣಿಕ ವರ್ಷದಲ್ಲಿ ಸರಿಸುಮಾರು 2,00,000 ಭಾರತೀಯ ವಿದ್ಯಾರ್ಥಿಗಳು ಅಮೆರಿಕವನ್ನು ತಮ್ಮ ಉನ್ನತ ಶಿಕ್ಷಣದ ತಾಣವಾಗಿ ಆಯ್ಕೆ ಮಾಡಿಕೊಂಡಿದ್ದು ಈ ಸಂಖ್ಯೆ ಹಿಂದಿನ ವರ್ಷಕ್ಕಿಂತ ಶೇ.19ರಷ್ಟು ಹೆಚ್ಚಳವಾಗಿದೆ.

ಅಮೆರಿಕದಲ್ಲಿ ಕಲಿಯುತ್ತಿರುವ ಹತ್ತು ಲಕ್ಷಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಲ್ಲಿ ಸುಮಾರು ಶೇ.21ರಷ್ಟು ಮಂದಿ ಭಾರತೀಯ ವಿದ್ಯಾರ್ಥಿಗಳಾಗಿದ್ದಾರೆ.

                ಮಿನಿಸ್ಟರ್ ಕೌನ್ಸೆಲರ್ ಫಾರ್ ಪಬ್ಲಿಕ್ ಡಿಪ್ಲೊಮಸಿ, ಗ್ಲೋರಿಯಾ ಬರ್ಬೆನಾ 'ಅಮೆರಿಕವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಭಾರತಕ್ಕೆ ಅಭಿನಂದನೆಗಳು. ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಅಮೆರಿಕದ ಶಿಕ್ಷಣದ ಮೌಲ್ಯವನ್ನು ಗುರುತಿಸಿರುವುದು ಇದರಿಂದ ಸ್ಪಷ್ಟವಾಗಿದೆ. ಇಲ್ಲಿನ ಶಿಕ್ಷಣ ವಿದ್ಯಾರ್ಥಿಗಳಿಗೆ ಹೊಸದಾಗಿ ಗಳಿಸಿದ ಜ್ಞಾನದಿಂದ ಜಗತ್ತಿನ ಸವಾಲುಗಳನ್ನು ಎದುರಿಸಲು ತಯಾರು ಮಾಡುತ್ತದೆ. ಜೊತೆಗೆ ಅವರನ್ನು ಕೃತಕ ಬುದ್ಧಿಮತ್ತೆ, ಉದಯೋನ್ಮುಖ ತಂತ್ರಜ್ಞಾನ, ಉದ್ಯಮಶೀಲತೆ ಹಾಗೂ ಆವಿಷ್ಕಾರದಂತಹ ಭವಿಷ್ಯದ ಅವಕಾಶಗಳಿಗೆ ಸನ್ನದ್ಧವಾಗಿಸುತ್ತದೆ'ಎಂದರು.

                   ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗಲು ಯು.ಎಸ್. ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಅಫೇರ್ಸ್ ನವದೆಹಲಿ, ಚೆನ್ನೈ, ಕೊಲ್ಕತಾ, ಬೆಂಗಳೂರು, ಅಹಮದಾಬಾದ್, ಮುಂಬೈ ಮತ್ತು ಹೈದರಾಬಾದ್‌ನ ಎರಡು ಕಡೆಗಳಲ್ಲಿ ವರ್ಚುವಲ್ ರೂಪದಲ್ಲಿ ವೈಯಕ್ತಿಕವಾಗಿ ಮತ್ತು ಆಫ್ಲೈನ್​ನಲ್ಲಿ ಯುಎಸ್‌ಎ ಎಜುಕೇಷನ್ ಅಡ್ವೈಸಿಂಗ್ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಲಹಾ ಸೇವೆಗಳನ್ನು ನೀಡುತ್ತದೆ. ಎಲ್ಲ ಎಂಟು ಕೇಂದ್ರಗಳು ಅಮೆರಿಕದ ಎಜುಕೇಷನ್ ಸಲಹೆಗಾರರನ್ನು ಹೊಂದಿದ್ದು, ಅವರು ಅಮೆರಿಕದಲ್ಲಿ ಅಧ್ಯಯನ ಮಾಡುವ ಅವಕಾಶಗಳನ್ನು ಕುರಿತು ನಿಖರ, ಸಮಗ್ರ ಮತ್ತು ಅಪ್-ಟು-ಡೇಟ್ ಮಾಹಿತಿಯನ್ನು ನೀಡುವ ಮೂಲಕ ಭಾರತೀಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕೋರ್ಸ್​ ಹುಡುಕಲು ಮಾನ್ಯತೆ ಪಡೆದ ಅಮೆರಿಕದ 4,000 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಕ್ಕೆ ಸೇರಿಕೊಳ್ಳಲು ನೆರವಾಗುತ್ತಾರೆ.

                      ಅಮೆರಿಕದಲ್ಲಿ ಅಧ್ಯಯನ ಮಾಡುವ ಕುರಿತು ಹೆಚ್ಚಿನ ಮಾಹಿತಿ ಬಯಸುವ ವಿದ್ಯಾರ್ಥಿಗಳು ಮತ್ತು ಕುಟುಂಬಗಳು ಎಜುಕೇಷನ್‌ಯುಎಸ್‌ಎ ಇಂಡಿಯಾ ಆಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದು ಐಒಎಸ್ ಮತ್ತು ಆಂಡ್ರಾಯಿಡ್ ಮೊಬೈಲ್​ಗಳಿಗೆ ಉಚಿತವಾಗಿ ದೊರೆಯುತ್ತದೆ. ಈ ಆಯಪ್ ಕಾಲೇಜು ಅರ್ಜಿ ಪ್ರಕ್ರಿಯೆ ಕುರಿತು ಅತ್ಯಾಧುನಿಕ ಮಾಹಿತಿ ನೀಡುತ್ತದೆ. ಜೊತೆಗೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುವ ಯೋಚನೆ ಇರುವವರಿಗೆತ್ವರಿತ ಮತ್ತು ಸುಲಭದ ಮೊದಲ ಹೆಜ್ಜೆಯಾಗಿದೆ.

ಭೇಟಿ ನೀಡಿ: https://educationusa.state.gov/country/in

                       ಓಪನ್ ಡೋರ್ಸ್ ಎಂದರೇನು?

               ದಿ ಇನ್ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಎಜುಕೇಷನ್(ಐಐಇ) ಓಪನ್ ಡೋರ್ಸ್ ರಿಪೋರ್ಟ್ ಪ್ರಕಟಿಸುತ್ತದೆ. ಐಐಇ 1919ರಲ್ಲಿ ತನ್ನ ಸ್ಥಾಪನೆಯಾದ ದಿನದಿಂದಲೂ ಅಮೆರಿಕದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಾರ್ಷಿಕ ಅಂಕಿ ಅಂಶಗಳ ಸಮೀಕ್ಷೆ ನಡೆಸುತ್ತದೆ. ಇದು 1972ರಿಂದ ಯು.ಎಸ್. ಡಿಪಾರ್ಟ್ಮೆಂಟ್ ಆಫ್ ಸ್ಟೇಟ್‌ನ ಬ್ಯೂರೋ ಆಫ್ ಎಜುಕೇಷನಲ್ ಅಂಡ್ ಕಲ್ಚರಲ್ ಅಫೇರ್ಸ್ ಜೊತೆ ಸಹಯೋಗ ಹೊಂದಿದೆ. ಓಪನ್ ಡೋರ್ಸ್ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿರುವ ಅಂತಾರಾಷ್ಟ್ರೀಯ ವಿದ್ವಾಂಸರ ಸಂಖ್ಯೆಯನ್ನು ಹಾಗೂ ಪ್ರಿ-ಅಕಾಡೆಮಿಕ್ ಇಂಟೆನ್ಸಿವ್ ಇಂಗ್ಲಿಷ್ ಪ್ರೋಗ್ರಾಮ್​ನಲ್ಲಿ ನೋಂದಣಿಯಾದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವರದಿ ತಯಾರು ಮಾಡುತ್ತದೆ. ಓಪನ್ ಡೋರ್ಸ್ 2022 ವರದಿಯಲ್ಲಿ ಸೆಪ್ಟೆಂಬರ್​ 2021ರಿಂದ ಜನವರಿ 2022ರ ನಡುವೆ ಅಮೆರಿಕದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಆನ್‌ಲೈನ್ ಮೂಲಕ ಕಲಿಯುತ್ತಿರುವ ವಿದೇಶದಲ್ಲಿರುವ ವಿದ್ಯಾರ್ಥಿಗಳು ಮತ್ತು ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್‌ನಲ್ಲಿರುವವರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳೂ ಒಳಗೊಂಡಿದ್ದಾರೆ. ಹೆಚ್ಚಿನ ಮಾಹಿತಿ, ಇನ್ಫೋಗ್ರಾಫಿಕ್ಸ್ ಮತ್ತು ಇತರ ಸಂಪನ್ಮೂಲಗಳಿಗಾಗಿ ಭೇಟಿ ನೀಡಿ: www.iie.org/OpenDoors

          ಯು.ಎಸ್. ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಬ್ಯೂರೋ ಆಫ್ ಎಜುಕೇಷನಲ್ ಆಯಂಡ್ ಕಲ್ಚರಲ್ ಅಫೇರ್ಸ್

             ಯು.ಎಸ್. ಡಿಪಾರ್ಟ್ಮೆಂಟ್ ಆಫ್ ಸ್ಟೇಟ್‌ನ ದಿ ಬ್ಯೂರೋ ಆಫ್ ಎಜುಕೇಷನಲ್ ಅಂಡ್ ಕಲ್ಚರಲ್ ಅಫೇರ್ಸ್(ಇಸಿಎ) ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ವೃತ್ತಿಪರ ಮತ್ತು ಖಾಸಗಿ ವಲಯದ ವಿನಿಮಯಗಳು, ಸಾರ್ವಜನಿಕ-ಖಾಸಗಿ ಸಹಯೋಗಗಳು ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳ ಮೂಲಕ ಅಮೆರಿಕದ ಜನರು ಮತ್ತು ಇತರೆ ದೇಶಗಳ ಜನರ ನಡುವೆ ಬಾಂಧವ್ಯ ನಿರ್ಮಿಸುತ್ತದೆ. ವಾರ್ಷಿಕ ಸುಮಾರು 50,000 ಮಂದಿ ಈ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ, ಅದರಲ್ಲಿ ಮುಂಚೂಣಿಯ ಫುಲ್ ಬ್ರೈಟ್ ಪ್ರೋಗ್ರಾಮ್ ಮತ್ತು ಇಂಟರ್‌ನ್ಯಾಷನಲ್ ವಿಸಿಟರ್ ಲೀಡರ್‌ಶಿಪ್ ಪ್ರೋಗ್ರಾಮ್ ಒಳಗೊಂಡಿವೆ. ಇಸಿಎ ಅಮೆರಿಕದಲ್ಲಿ ಆರ್ಥಿಕ ನೆರವಿನ ಅಗತ್ಯವಿರುವ ಪದವಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಬೆಂಜಮಿನ್ ಎ.ಗಿಲ್ಮನ್ ಶಿಷ್ಯವೇತನ ನೀಡುತ್ತದೆ. ಯು.ಎಸ್. ಫಾರಿನ್ ಲಾಂಗ್ವೇಜ್ ಸ್ಟಡಿ ಅಬ್ರಾಡ್ ಬೆಂಬಲಕ್ಕೆ ಕ್ರಿಟಿಕಲ್ ಲಾಂಗ್ವೇಜ್ ಸ್ಕಾಲರ್‌ಶಿಪ್ ಪ್ರೋಗ್ರಾಮ್ ಮತ್ತು 400ಕ್ಕೂ ಹೆಚ್ಚು ಸಲಹಾ ಕೇಂದ್ರಗಳಿಗೆ ಜಗತ್ತಿನಾದ್ಯಂತ ಎಜುಕೇಷನ್‌ಯುಎಸ್‌ಎ ವೆಬ್​ಸೈಟ್​ ಮೂಲಕ ಅಮೆರಿಕದಲ್ಲಿ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತದೆ. ಈಗ ಕೋವಿಡ್-19 ನಂತರ ಇಸಿಎ ತನ್ನ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ಪುನಶ್ಚೇತನಗೊಳಿಸಿದೆ. ಡಿಪಾರ್ಟ್ಮೆಂಟ್ ಆಫ್ ಸ್ಟೇಟ್‌ ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಜಾಲ ತಾಣಕ್ಕೆ ಭೇಟಿ ನೀಡಿ: eca.state.gov


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries