ಬದಿಯಡ್ಕ: ಕುಕ್ಕಂಕೋಡ್ಲು ಶ್ರೀಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವದಂಗವಾಗಿ ನಡೆದ ಸಮಾರಂಭದಲ್ಲಿ ದೇವಸ್ಥಾನದ ಎದುರು ಭಾಗದ ರಸ್ತೆಯ ಕಾಂಕ್ರೀಟೀಕರಣಕ್ಕೆ ಮುತುವರ್ಜಿ ವಹಿಸಿ, ಅಚ್ಚುಕಟ್ಟಾಗಿ ನಿರ್ವಹಿಸಿದ ಬ್ಲಾಕ್ ಸದಸ್ಯೆ ವಿದುಷಿಃ ಅಶ್ವಿನಿ ಭಟ್ ಅವರನ್ನು ದೇವಸ್ಥಾನದ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ ಛಾಯಾಚಿತ್ರ ನೀಡಿ ಅಭಿನಂದಿಸಲಾಯಿತು.
ನಂತರ ಮುಂದಿನ ತಿಂಗಳು 28 ಮತ್ತು 29 ರ0ದು ನಡೆಯಲಿರುವ ಕಿರುಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಮೊಕ್ತೇಸರ ನ್ಯಾಯವಾದಿ. ಗೌರೀಶಂಕರ ರೈ, ವಹಿಸಿದರು.ಕಾರ್ಯಾಧ್ಯಕ್ಷ ಏವುಂಜೆ ಶಾಂ ಭಟ್, ಕಾರ್ಯದರ್ಶಿ ಮಹೇಶ ಭಟ್, ಕೊಲ್ಲಂಗಾನ ಸುಂದರ ಶೆಟ್ಟಿ ಮುಂದಿನ ಕಾರ್ಯದ ಬಗ್ಗೆ ಮಾತನಾಡಿದರು. ಜನವರಿ 27 ರಂದು ನಡೆಯಲಿರುವ ಉತ್ಸವದ ಬಗ್ಗೆ ಚರ್ಚಿಸಲಾಯಿತು .ಸುಂದರ ಶೆಟ್ಟಿ ಸ್ವಾಗತಿಸಿ, ಚಂದ್ರಹಾಸ ರೈ ವಂದಿಸಿದರು.







