ಮುಳ್ಳೇರಿಯ: ಗಾಳಿಮುಖ ಶಕ್ತಿನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 4ನೇ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಡಿ.11 ಮತ್ತು 12ರಂದು ನಾನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.11ರಂದು ರಾತ್ರಿ 8ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ ಶಕ್ತಿನಗರ ಇವರಿಂದ ಭಜನೆ, ಡಿ.12ರಂದು ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, 8ಕ್ಕೆ ಶ್ರೀ ಅಯ್ಯಪ್ಪ ಭಜನಾ ಸಂಘ ಕುಂಟಾರು ಇವರಿಂದ ಭಜನೆ, 9ಕ್ಕೆ ಶ್ರೀ ಅಣ್ಣಪ್ಪ ಪಂಜುರ್ಲಿ ಭಜನಾ ಸಂಘ ಕಟ್ಟತ್ತಬಯಲು ಇವರಿಂದ ಭಜನೆ, 10ಕ್ಕೆ ಶ್ರೀ ಕರಿಚಾಮುಂಡಿ ಭಜನಾ ಸಂಘ ಮಾಯಿಲಂಕೋಟೆ ಇವರಿಂದ ಭಜನೆ, 11ಕ್ಕೆ ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ ಈಶ್ವರಮಂಗಲ ಇವರಿಂದ ಭಜನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನದಾನ, 1.30ಕ್ಕೆ ರಮೇಶ್ ಶಿರ್ಲಾಲ್ ಸಾರಥ್ಯದಲ್ಲಿ ಗಾನಲಹರಿ ಕಾರ್ಕಳ ಇವರಿಂದ ಭಕ್ತಿರಸಮಂಜರಿ, ಸಂಜೆ 5ಕ್ಕೆ ಉಯಿತ್ತಡ್ಕ ಶ್ರೀ ಮೂಕಾಂಬಿಕಾ ಭಜನಾ ಸಂಘದವರಿಂದ ಭಜನೆ, 6ಕ್ಕೆ ಕುಂಟಾರು ಶ್ರೀಕೃಷ್ಣ ಕುಣಿತ ಭಜನಾ ಸಂಘದವರಿಂದ ಕುಣಿತ ಭಜನೆ, 7ಕ್ಕೆ ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಭಜನಾ ಸಂಘದವರಿಂದ ಭಜನೆ, ಕುಂಟಾರು ಶ್ರೀ ಕ್ಷೇತ್ರದಿಂದ ಉಲ್ಪೆ ಮೆರವಣಿಗೆ ಹೊರಡುವುದು, ರಾತ್ರಿ 8ಕ್ಕೆ ಕೈತ್ತೋಡು ಶ್ರೀ ಶಾರದಾಂಬಾ ಭಜನಾ ಸಂಘದವರಿಂದ ಭಜನೆ, 9ಕ್ಕೆ ಮಹಾಪೂಜೆ, ಅಯ್ಯಪ್ಪ ವ್ರತಧಾರಿಗಳಿಗೆ ಫಲಾಹಾರ, ಅನ್ನದಾನ ನಡೆಯಲಿದೆ.
ಡಿ.11ರಿಂದ ಗಾಳಿಮುಖ ಭಜನಾ ಮಂದಿರದ ವಾಷಿಕೋತ್ಸವ
0
ಡಿಸೆಂಬರ್ 10, 2022
Tags

