ಕಾಸರಗೋಡು: ಜಿಲ್ಲಾ
ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾಸರಗೋಡು, ಪರಪ್ಪ ಬ್ಲಾಕ್ ಗಿರಿಜನ
ಅಭಿವೃದ್ಧಿ ಕಛೇರಿ ಇವುಗಳ ಜಂಟಿ ಆಶ್ರಯದಲ್ಲಿ "ನಮನ ಎಲ್ಲೆಗ್" ಎಂಬ ಪರಿಶಿಷ್ಟ ವರ್ಗಗಳ
ಸಂಗಮವನ್ನು ನಡೆಸಲಾಗುವುದು. ನಾಳೆ (ಡಿಸೆಂಬರ್ 12) ಬೆಳಗ್ಗೆ 10.30ಕ್ಕೆ ಪರಪ್ಪ
ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಪರಪ್ಪ ಬ್ಲಾಕ್ ಪಂಚಾಯತ್
ಅಧ್ಯಕ್ಷೆ ಎಂ.ಲಕ್ಷ್ಮಿ, ಮಂಗಳಂಕಳಿ ಕಲಾವಿದೆ ಹಾಗೂ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ
ಪುರಸ್ಕೃತೆ ಉಂಬಿಚ್ಚಿಯಮ್ಮ ಎಂಬುವರು ಸೇರಿ ಕಾರ್ಯಕ್ರಮ ಉದ್ಘಾಟಿಸುವರು.
ಪರಪ್ಪ
ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಕೆ.ಭೂಪೇಶ್ ಅಧ್ಯಕ್ಷತೆ ವಹಿಸುವರು. ಪರಪ್ಪ ಪರಿಶಿಷ್ಟ
ವರ್ಗಗಳ ಅಭಿವೃದ್ಧಿ ಅಧಿಕಾರಿ ಹೆರಾಲ್ಡ್ ಜಾನ್ ಪ್ರಾಸ್ತಾವಿಕ ಉಪನ್ಯಾಸ ನೀಡಲಿದ್ದಾರೆ.
ಮಹಿಳಾ ಸುರಕ್ಷತೆ ವಿಚಾರ ಸಂಕಿರಣ, ಮಾದಕ ವಸ್ತು ವಿರೋಧಿ ವಿಚಾರ ಸಂಕಿರಣ ಹಾಗೂ ವೃತ್ತಿ
ಮಾರ್ಗದರ್ಶನ ತರಗತಿ ನಡೆಯಲಿದೆ. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಸಿ.ಕೆ.ಶೀಬಾ
ಮುಮ್ತಾಜ್, ಅಬಕಾರಿ ತಡೆ ಅಧಿಕಾರಿ ಎನ್.ಜಿ.ರಘುನಾಥನ್, ಡಾ.ಜಿ.ಕೆ.ಗೋಪೇಶ್ ತರಗತಿ
ನಡೆಸಿ ಕೊಡಲಿದ್ದಾರೆ. ಚರ್ಚೆಗಳು ಹಾಗೂ ಬುಡಕಟ್ಟು ಜನಾಂಗದವರ ಕಲಾ ಕಾರ್ಯಕ್ರಮಗಳು
ನಡೆಯಲಿವೆ.

