ಬದಿಯಡ್ಕ: ಸೇವಾ ಸಂಸ್ಥೆಗಳು ಫಲಾಪೇಕ್ಷೆ ಇಲ್ಲದೆ ಮುನ್ನಡೆಸುವ ಚಟುವಟಿಕೆಗಳಿಗೆ ಸಮಾಜದಲ್ಲಿ ಎಂದಿಗೂ ಉನ್ನತ ಮೌಲ್ಯಗಳಿವೆ. ರೋಟರಿ ಸಂಸ್ಥೆ ಇಂತಹ ಮಹತ್ವಿಕೆಯ ಇತಿಹಾಸವಿರುವ ಸಂಸ್ಥೆಯಾಗಿ ಸಮಾಜಮುಖಿ ಚಟುವಟಿಕೆಗಳಿಂದ ಜನಮನಗೆದ್ದಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ವಿ.ವಿ. ಪ್ರಮೋದ್ ನಾಯನಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬದಿಯಡ್ಕದ ಸೈಂಟ್ ಮೇರಿಸ್ ಹಾಲ್ ನಲ್ಲಿ ನಡೆದ ರೋಟರಿ ಬದಿಯಡ್ಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ರೋಟರಿ ಶಿವದಾಸ್ ಅಧ್ಯಕ್ಷತೆ ವಹಿಸಿದ್ದರು. ಬಿ. ರಾಧಾಕೃಷ್ಣ ಪೈ ಬದಿಯಡ್ಕ ರೋಟರಿ ಅಧ್ಯಕ್ಷರಾಗಿ ಮತ್ತು ಕಾರ್ಯದರ್ಶಿಯಾಗಿ ವೈ. ರಾಘವೇಂದ್ರ ಪ್ರಸಾದ್, ಕೋಶಾಧಿಕಾರಿಯಾಗಿ ಕೇಶವ ಅವರನ್ನು ನಿಯುಕ್ತಿಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಉಪ ಗವರ್ನರ್ ಅನಿಲ್ ಕುಮಾರ್ ವಿ ನೂತನ ಕ್ಲಬ್ಬಿನ ಸದಸ್ಯರಿಗೆ ಕ್ಲಬ್ಬಿನ ಲಾಂಛನವನ್ನು ತೊಡಿಸಿ ಕ್ಲಬ್ಬಿಗೆ ನೂತನ ಸದಸ್ಯರನ್ನು ಬರಮಾಡಿಕೊಂಡರು.
ರೋಟರಿ ಅನಿಲ್ ಮೇಲತ್, ಎಂ.ಟಿ. ದಿನೇಶ್ ಕಾಸರಗೋಡು, ಪಿ ಸಿ ಸಾಜಿದ್, ಪ್ರಶಾಂತ್ ಕೆ ಮುಂತಾದವರು ಶುಭಾಶಂಸನೆಗೈದರು. ಕೇಂದ್ರೀಯ ವಿಶ್ವವಿದ್ಯಾಲಯ ಎಂ.ಬಿ.ಎ. ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಅಮಿತಾ ಜೋಸ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಏಳನೇ ರ್ಯಾಂಕ್ ಗಳಿಸಿದ ಶ್ರೇಯಸ್ ಓಡಂಗಲ್ಲು ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಸಭೆಯಲ್ಲಿ ನೀಲೇಶ್ವರ, ಕಾಞಂಗಾಡು ಮತ್ತು ಕಾಸರಗೋಡು ರೋಟರಿ ಕ್ಲಬಿನ ವಿವಿಧ ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಲ್.ಎನ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೈ ರಾಘವೇಂದ್ರ ವಂದಿಸಿದರು. ದಿನೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಬದಿಯಡ್ಕದಲ್ಲಿ ರೋಟರಿ ಕ್ಲಬ್ ಅಸ್ತಿತ್ವಕ್ಕೆ
0
ಡಿಸೆಂಬರ್ 10, 2022

.jpg)
