ಮಂಜೇಶ್ವರ :ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮುಳಿಂಜ ಗ್ರಾಮದ ಬುರಾಕ್ ಸ್ಟ್ರೀಟ್ ಎಂಬಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಿ ಹಲವು ವರ್ಷಗಳಿಂದ ಕೈವಶವಿರಿಸಿದ ಬಳಿಕ ಇದನ್ನು ಮಾರಾಟ ನಡೆಸಿದ ಪ್ರಕರಣದ ಬಗ್ಗೆ ವಿಜಿಲೆನ್ಸ್ ಅಧಿಕರಿಗಳು ತನಿಖೆ ಆರಂಭಿಸಿದ್ದಾರೆ.
ವಿಜಿಲೆನ್ಸ್ ಡಿವೈಎಸ್‍ಪಿ ಕೆ.ವಿ ವೇಣುಗೋಪಾಲ್ ನೇತೃತ್ವದ ಅಧಿಕಾರಿಗಳ ತಮಡ ಉಪ್ಪಳ ಮುಳಿಯ ಗ್ರೂಪ್ ವಿಲ್ಲೇಜ್ ಕಚೇರಿ, ಮಂಜೇಶ್ವರ ತಾಲೂಕು ಕಚೇರಿ ಹಾಗೂ ವಂಚನೆ ನಡೆದ ಜಾಗಕ್ಕೆ ತೆರಳಿ ತಪಸಣೆ ನಡೆಸಿದರು. ಸರ್ಕಾರಿ ಜಾಗವನ್ನು ಅತಿಕ್ರಮಿಸಿ, ಬಳಿಕ ರೀಸರ್ವೇ ನಡೆಯುವ ಸಂದರ್ಭ ಅಧಿಕಾರಿಗಳ ಮೂಲಕ ಜಾಗವನ್ನು ಈ ವ್ಯಕ್ತಿ ತನ್ನ ಹೆಸರಿಗೆ ನಂತರ ಈ ಜಾಗವನ್ನು ತನ್ನ ಪತ್ನಿಯ ಹೆಸರಿಗೆ ನೋಂದಾಯಿಸಿಕೊಂಡಿದ್ದನು. ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ವಂಚನೆಯಲ್ಲಿ ಶಾಮೀಲಾಗಿರುವುದಾಗಿ ಸಂಶಯಿಸಲಾಗಿದೆ.
ಸರ್ಕಾರಿ ಜಾಗ ಅತಿಕ್ರಮಿಸಿ ಸ್ವಾಧೀನ: ವಿಜಿಲೆನ್ಸ್ ತನಿಖೆ
0
ಡಿಸೆಂಬರ್ 10, 2022

