ಕಾಸರಗೋಡು: ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಾಮಗಾರಿ ಪೂರ್ತಿಗೊಳಿಸದೆ, ಕೇವಲ ಭರವಸೆಗಳನ್ನು ನೀಡುವ ಮೂಲಕ ಎಡರಂಗ ಸರ್ಕಾರ ಕಾಸರಗೋಡಿನ ಜನತೆಗೆ ವಂಚನೆಯೆಸಗುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ತಿಳಿಸಿದ್ದಾರೆ. ಏಕ ಕಾಲಕ್ಕೆ ಶಿಲಾನ್ಯಾಸ ನಡೆಸಿದ ಇಡುಕ್ಕಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ಪೂರ್ತಿಗೊಂಡು ಆಸ್ಪತ್ರೆ ಕಾರ್ಯಾಚರಿಸುತ್ತಿದ್ದರೂ, ಕಾಸರಗೋಡು ಜಿಲ್ಲೆಯ ಬಗ್ಗೆ ಸರ್ಕಾರ ತೋರುವ ಅವಗಣನೆ ಖಂಡನೀಯ.
ಜಿಲ್ಲೆಗೆ ಏಮ್ಸ್ ಮಂಜೂರಾಗಿ ಲಭಿಸಬೇಕಾದರೆ, ನಿಗದಿತ ಅಂತರದಲ್ಲಿ ವೈದ್ಯಕೀಯ ಕಾಲೇಜು ಕಾರ್ಯಾಚರಿಸುವುದು ಕಡ್ಡಾಯವಾಗಿದೆ. ಈ ಆಶಯವನ್ನೂ ವಿಫಲಗೊಳಿಸಲು ಎಡರಂಗ ಸರ್ಕಾರ ಪ್ರಯತ್ನಿಸುತ್ತಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆಯ ನಿರ್ಮಾಣಕಾಮಗಾರಿಯನ್ನು ಶೀಘ್ರ ಪೂರ್ತಿಗೊಳಿಸುವುದರೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿರುವ ಕಾಸರಗೋಡಿಗೆ ಸುಸಜ್ಜಿತ ಆಸ್ಪತ್ರೆ ಮಂಜೂರಾಗಿ ಲಭಿಸುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವೈದ್ಯಕೀಯ ಕಾಲೇಜು ನಿರ್ಮಾಣಕಾರ್ಯ ವಿಳಂಬ-ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ: ಬಿಜೆಪಿ
0
ಡಿಸೆಂಬರ್ 02, 2022
Tags




