ಕಾಸರಗೋಡು: ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾಞಂಗಾಡು ನಗರಸಭೆ ಸಭಾಂಗಣದಲ್ಲಿ ಜರುಗಿತು. ಕಾಸರಗೋಡು ಜಿಲ್ಲಾ ಪಂಚಾಯಿತಿ ಆರೋಗ್ಯ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ ಉದ್ಘಾಟಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಮುರಳೀಧರ ನಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಸುಫ್ಯಾನ್ ಅಹ್ಮದ್ ಮುಖ್ಯ ಅತಿಥಿಯಾಗಿದ್ದರು. ಆನಂದಾಶ್ರಮದ ವೈದ್ಯಾಧಿಕಾರಿ ಡಾ.ಜಾನ್ ಜಾನ್ ಪ್ರಮಾಣ ವಚನ ಬೋಧಿಸಿದರು. ವಿಶ್ವ ಏಡ್ಸ್ ದಿನಾಚರಣೆ: ಜಿಲ್ಲಾ ಮಟ್ಟದ ಉದ್ಘಾಟನೆ ಕಾಞಂಗಾಡ್ ಪುರಸಭೆ ಜಿಲ್ಲಾ ಕೌನ್ಸಿಲರ್ ವಂದನಾ, ಕಾಞಂಗಾಡ್ ಐಎಂಎ ಅಧ್ಯಕ್ಷ ಡಾ.ಟಿ.ವಿ ಪದ್ಮನಾಭನ್, ಜಿಲ್ಲಾ ನಸಿರ್ಂಗ್ ಅಧಿಕಾರಿ ಎಂ.ಮೇರಿಕುಟ್ಟಿ, ಎಂಸಿಎಚ್ ಅಧಿಕಾರಿ ಎನ್.ತಂಗಮಣಿ, ಐಎಂಎ ಅಧ್ಯಕ್ಷ ಡಾ. ನಾರಾಯಣ ನಾಯ್ಕ್, ಎಆರ್‍ಟಿ ನೋಡಲ್ ಅಧಿಕಾರಿ ಡಾ. ಜನಾರ್ದನ ನಾಯ್ಕ್, ಜಿಲ್ಲಾ ಕ್ಷಯರೋಗ ಕಛೇರಿಯ ವೈದ್ಯಾಧಿಕಾರಿ ಡಾ.ನಾರಾಯಣ ಪ್ರದೀಪ ಹಾಗೂ ಕೇರ್‍ವೆಲ್ ನಸಿರ್ಂಗ್ ಸ್ಕೂಲ್‍ನ ನಿರ್ದೇಶಕ ಅಲೆಕ್ಸ್ ಜಾರ್ಜ್ ಉಪಸ್ಥಿತರಿದ್ದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಉಪ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಎಸ್. ಸಯನಾ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಕಾಞಂಗಾಡು ಹಳೇ ಬಸ್ ನಿಲ್ದಾಣ ವಠಾರದಿಂದ ನಗರಸಭಾಂಗಣದವರೆಗೆ ಏಡ್ಸ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ನಸಿರ್ಂಗ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಕಾಞಂಗಾಡ್ ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್ ರ್ಯಾಲಿಗೆ ಚಾಲನೆ ನೀಡಿದರು.
ವಿಶ್ವ ಏಡ್ಸ್ ದಿನಾಚರಣೆ ಜಿಲ್ಲಾ ಮಟ್ಟದ ಉದ್ಘಾಟನೆ, ವಿಚಾರ ಸಂಕಿರಣ
0
ಡಿಸೆಂಬರ್ 02, 2022
Tags





