ಕಾಸರಗೋಡು: ಕೇರಳ ಲೋಕಸೇವಾ ಆಯೋಗ(ಪಿಎಸ್‍ಸಿ)ಪರಿಶಿಷ್ಟ ವರ್ಗ(ಬುಡಕಟ್ಟು ಸಮುದಾಯ)ದ ಜನತೆಗೆ ಈ ಹಿಂದೆ ಫಾರೆಸ್ಟ್ ಬೀಟ್ ಅಧಿಕಾರಿಗಳ ನೇಮಕಾತಿಗಾಗಿ ನಡೆಸಲಾಗಿದ್ದ ಪರೀಕ್ಷೆಯನ್ನು ಕನ್ನಡ ಭಾಷಿಗರಿಗಾಗಿ ಪ್ರತ್ಯೇಕವಾಗಿ ನಡೆಸಲು ತೀರ್ಮಾನಿಸಿದೆ. ಆರು ತಿಂಗಳ ಹಿಂದೆ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಕನ್ನಡ ಪ್ರಶ್ನೆ ಪತ್ರಿಕೆ ನೀಡದಿರುವುದನ್ನು ಪ್ರಶ್ನಿಸಿ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಪಿಎಸ್‍ಸಿಗೆ ದೂರು ಸಲ್ಲಿಸಿದ್ದರು. ಪಿಎಸ್‍ಸಿ ಕಮಿಷನ್ ಸಿಟ್ಟಿಂಗ್ ನಡೆಸಿ, ಈ ಬಗ್ಗೆ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಲು ಆದೇಶಿಸಿದೆ.
ಕೇರಳದಲ್ಲಿ ಆಲಪ್ಪುಳ ಜಿಲ್ಲೆ ಹೊರತುಪಡಿಸಿ ಇತರ ಎಲ್ಲಾ ಜಿಲ್ಲೆಗಳಲ್ಲೂ ಫಾರೆಸ್ಟ್ ಬೀಟ್ ಅಧಿಕಾರಿಗಳ ನೇಮಕಾತಿಗಾಗಿ ಪರೀಕ್ಷೆ ನಡೆದಿದೆ. ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯಲ್ಲಿ ತಲಾ 45 ಹುದ್ದೆ ಸೇರಿದಂತೆ ಒಟ್ಟು 500ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಕಾಸರಗೋಡಿನಿಂದ 2ಸಾವಿರದಷ್ಟು ಮಂದಿ ಪರೀಕ್ಷೆ ಬರೆದಿದ್ದು, ಇದರಲ್ಲಿ ಮಲಯಾಳ ಪ್ರಶ್ನೆ ಪತ್ರಿಕೆ ಲಭಿಸಿದವರು ಪರೀಕ್ಷೆ ಬರೆದಿದ್ದರೂ, ಮಲಯಾಳ ಅರಿಯದ ಕನ್ನಡ ಭಾಷಿಗರಿಗೆ ಪರೀಕ್ಷೆ ಬರೆಯಲಾಗದ ಸ್ಥಿತಿ ಎದುರಾಗಿತ್ತು. ಕನ್ನಡ ಅಭ್ಯರ್ಥಿಗಳಿಗಾಗಿ ಮುಂದೆ 2023 ಜ. 29ಕ್ಕೆ ಪರೀಕ್ಷೆ ನಡೆಸಲು ಪಿಎಸ್‍ಸಿ ತೀರ್ಮಾನಿಸಿದೆ.
ಫಾರೆಸ್ಟ್ ಬೀಟ್ ಅಧಿಕಾರಿಗಳ ನೇಮಕಾತಿ: ಕನ್ನಡಿಗರಿಗಾಗಿ ಪ್ರತ್ಯೇಕ ಪರೀಕ್ಷೆ ನಡೆಸಲು ಪಿಎಸ್‍ಸಿ ತೀರ್ಮಾನ
0
ಡಿಸೆಂಬರ್ 14, 2022
Tags





