ಉಪ್ಪಳ: ಕ್ರಿಸ್ಮಸ್ ಹಾಗು ಹೊಸವರ್ಷದ ಪ್ರಯುಕ್ತ ಸರ್ವಶಿಕ್ಷಾ ಕೇರಳ-ಕಾಸರಗೋಡಿನ-ಮಂಜೇಶ್ವರ ಬಿ.ಆರ್.ಸಿ ಸಹಯೋಗದಲ್ಲಿ ಚಂಗಾದಿ ಕೂಟಂ-ಕಾರ್ಯಕ್ರಮ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಭಿನ್ನ ಸಾಮಥ್ಯದ .ವಿಧ್ಯಾರ್ಥಿಗಳ ಗೃಹ ಸಂದರ್ಶನದ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ವಿಕಲ ಚೇತನ ವಿದ್ಯಾರ್ಥಿಗಳಿಗೆ ಕ್ರಿಸ್ಮಸ್ ಕಿಟ್ಟು ,ಕ್ರಿಸ್ಮಸ್ ಕಾರ್ಡು,ರೇಡಿಯೊ ಮತ್ತು ,ಫೀಡಿಂಗ್ ಚೇರ್ ನೀಡಲಾಯಿತು. ಶಾಲಾ ವಿಧ್ಯಾರ್ಥಿಗಳು ಪದ್ಯ ಹಾಡಿ,ಕಥೆ ಹೇಳಿ ರಂಜಿಸಿದರು. ಮಂಗಲ್ಪಾಡಿ ಪಂಚಾಯತ್ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷೆ ಇರ್ಪಾನ ಇಕ್ಬಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಮುಳಿಂಜ ಶಾಲಾ ಮು ಖ್ಯ ಶಿಕ್ಷಕಿ ಚಿತ್ರಾವತಿ ವೈ ರಾವ್ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು. ಬಿ. ರ್. ಸಿ. ಸ್ಪೆಶಲಿಸ್ಟ್ ಟೀಚರ್ ರೀಮ ಜಸಿಂತ ಮೊಂತೆರೋ ಸ್ವಾಗತಿಸಿ, ರೂಪ ಟೀಚರು ವಂದಿಸಿದರು.
ಮುಳಿಂಜ ಶಾಲೆಯಲ್ಲಿ ಚಂಗಾದಿ ಕೂಟಂ
0
ಡಿಸೆಂಬರ್ 29, 2022





